`ಅಗ್ನಿಕುಂಡ” ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ

ನಿವೇದ್ಯ ಭಂಡಾರ – ಹೇಮಾವತಿ ಎಂ.ಸ್ವಾಮಿ ನಿರ್ಮಿಸುತ್ತಿರುವ `ಅಗ್ನಿಕುಂಡ’ ಚಿತ್ರಕ್ಕೆ  ಕರ್ನಾಟಕ ಡಿಜಿಟಲ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಹಾಡುಗಳ ಧ್ವನಿ ಮುದ್ರಣ ನಡೆಯಿತು.

 `ಜನ್ಮಕೊಟ್ಟೆ ನಾ ನಿನಗೆ ತಾಯಿಯಾದೆ ನೀ ನನಗೆ  ಹಗಲಿರುಳು ಜೀವವ ತೇದು ಸಲುಹಿರುವೆ ನನ್ನನ್ನು’ ಗೀತೆಯನ್ನು ಅರಸು ಅಂತಾರೆ ರಚಿಸಿದ್ದಾರೆ. ಎಸ್.ಮಹೇಶ್ ಬರೆದಿರುವ `ಸಂಕೋಚದ ಸ್ಪರ್ಷವಿದೆ ಪ್ರಾಯಕದ್ದು ಕಲಿಯೋಕೆ ಮನಸು ಅದರುತ್ತಿದೆ’ ಚಿತ್ರಕ್ಕೆ ಆರ್.ಮಲ್ಲಿಕಾರ್ಜುನ್ ನಿರ್ದೇಶಿಸುತ್ತಿದ್ದಾರೆ.

ಛಾಯಾಗ್ರಹಣ -ಪರಮೇಶ್, ಸಂಗೀತ-ರಾಜ್‍ಕಿಶೋರ್, ಭೂಷಣ್, ಅಂಬಿಕಾ ಸತ್ಯನಾರಾಯಣ, ಶ್ವೇತ, ಸಹನಿರ್ಮಾಪಕ ರಾಗಿರುವ ಈ ಚಿತ್ರ ಮಹಿಳಾ ಪ್ರಧಾನದ ಕ್ರೈಂಕಿಲ್ಲರ್ ಚಿತ್ರದ ಕಥಾವಸ್ತು ಹೊಂದಿದೆ. ಚಿತ್ರದಲ್ಲಿ ರಮಣಿತೊ ಚೌಧರಿ, ಬಿರಾಮೂರ್ತಿ, ಸಯ್ಯಾಜಿ ಸಿಂಧೆ, ಸಾಯಿ ದೀನಾ, ಕುಷಾಲ್ ಲಾರೆನ್ಸ್, ಯïಶೆಟ್ಟಿ ಮುನಿಸ್ವಾಮಿ, ನಾಗರಾಜರೆಡ್ಡಿ. ಶ್ವೇತ, ಅಮೂಲ್ ಗೌಡ, ಅಭಿ ಮುಂತಾದವರು ಅಭಿನಯಿಸುತ್ತಿದ್ದಾರೆ.  ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ.