ಅಗ್ನಿಕುಂಡದಂತಾದ ದೆಹಲಿ


ನವದೆಹಲಿ, ಮಾ. ೩೦- ರಾಷ್ಟ್ರ ರಾಜಧಾನಿ ದೆಹಲಿ ಬಿಸಲಿನ ಬೇಗೆಗೆ ಬೇಯುತ್ತಿದೆ. ಹೋಳಿಹಬ್ಬದ ದಿನ ಗರಿಷ್ಠ ತಾಪಮಾನ ೪೦.೧ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇದು ಕಳೆದ ೭೬ ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಹಾನಗರದ ಪ್ರಾತಿನಿಧಿಕ ದತ್ತಾಂ ಶವನ್ನು ಒದಗಿಸುವ ಸಫ್ದರ್‌ಜಂಗ್ ವೀಕ್ಷಣಾಲಯವು ೪೦.೧ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದ್ದು, ಸಾಮಾನ್ಯಕ್ಕಿಂತ ಎಂಟು ಪಟ್ಟು ಹೆಚ್ಚು ದಾಖಲಾಗಿದೆ ಎಂದು ಐಎಂಡಿಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
೧೯೪೫ರ ಮಾರ್ಚ್ ೩೧ರ ನಂತರ ದೆಹಲಿಯಲ್ಲಿ ಗರಿಷ್ಠ ೪೦.೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಅವರು ಹೇಳಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಶುಭ್ರ ಆಕಾಶದಿಂದ ಕೂಡಿದೆ. ಅತಿ ಕಡಿಮೆ ವೇಗದ ಗಾಳಿ ಮತ್ತು ಹೆಚ್ಚು ಬಿಸಿಲು ಅಧಿಕ ತಾಪಮಾನಕ್ಕೆ ಕಾರಣವಾಗಿದೆ ಎಂದು ಶ್ರೀವಾಸ್ತವ ಹೇಳಿದರು.
ಮಾರ್ಚ್ ೨೯, ೧೯೭೩ ರಲ್ಲಿ ನಗರದಲ್ಲಿ ಗರಿಷ್ಠ ೩೯.೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ನಜಫ್ ಗಢ, ನರೇಲಾ, ಪೀತಾಂಪುರ ಮತ್ತು ಪುಸಾಗಳಲ್ಲಿ ಗರಿಷ್ಠ ತಾಪಮಾನ ೪೧.೮ ಡಿಗ್ರಿ ಸೆಲ್ಸಿಯಸ್, ೪೧.೭ ಡಿಗ್ರಿ ಸೆಲ್ಸಿಯಸ್, ೪೧.೬ ಡಿಗ್ರಿ ಸೆಲ್ಸಿಯಸ್ ಮತ್ತು ೪೧.೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ನಗರದ ಕನಿಷ್ಠ ತಾಪಮಾನ ೨೦.೬ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು.ಬಯಲು ಸೀಮೆಯ ವರಿಗೆ ಗರಿಷ್ಠ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಮತ್ತು ಕನಿಷ್ಠ ೪.೫ ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಇದ್ದಾಗ “ಹೀಟ್ ವೇವ್ ಎಂದು ಘೋಷಿಸಲಾಗುತ್ತದೆ.
ಐಎಂಡಿ ಪ್ರಕಾರ, ಸಾಮಾನ್ಯತಾಪಮಾನದಿಂದ ಹೊರಹೋಗುವುದಾದರೆ ಒಂದು “ತೀವ್ರ ಶಾಖ ತರಂಗವನ್ನು ಘೋಷಿಸಲಾಗುತ್ತದೆ. ಗಂಟೆಗೆ ೩೫ ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಪ್ರಬಲ ಗಾಳಿ ಮಂಗಳವಾರ ಗರಿಷ್ಠ ತಾಪಮಾನ ೩೮ ಡಿಗ್ರಿ ಸೆಲ್ಸಿಯಸ್ ಗೆ ಇಳಿಯಲಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.