ಅಗಾಧವಾದ ವ್ಯಾಕರಣ ಸಂಪತ್ತು ಸಂಸ್ಕøತ ಭಾಷೆಯಲ್ಲಿದೆಃ ಪಂಡಿತ ಸಂಜೀವಾಚಾರ್ಯ ಮದಭಾವಿ

ವಿಜಯಪುರ, ಜು.25-ಒಂದು ಸಣ್ಣ ಶಬ್ದಕ್ಕೆ ಸಾವಿರಾರು ಅರ್ಥಗಳನ್ನು ಹೇಳಬಹುದಾದ ಶಬ್ಧ ಭಂಡಾರ ಸಂಸ್ಕøತ ಭಾಷೆಯಲ್ಲಿದೆ ಉಳಿದ ಯಾವ ಭಾಷೆಗಳಲ್ಲಿ ಇಷ್ಟು ಶಬ್ಧಕೋಶಗಳು ಇರಲು ಸಾಧ್ಯವಿಲ್ಲ ಸಂಸ್ಕøತದ ಒಟ್ಟು ಎಂಟು ವ್ಯಾಕರಣ ಇವೆ ಒಂದು ಜನ್ಮಕ್ಕೆ ಒಂದು ವ್ಯಾಕರಣ ಕಲಿಯಲು ಶಕ್ಯ. ಅಷ್ಟು ಅಘಾದವಾದ ವ್ಯಾಕರಣ ಸಂಪತ್ತು ಸಂಸ್ಕøತ ಭಾಷೆಯಲ್ಲಿದೆ ಎಂದು ನಗರದ ಸರ್ವಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತ ಸಂಜೀವಾಚಾರ್ಯ ಮದಭಾವಿ ಹೇಳಿದರು.
ಭಾನುವಾರ ದಿ.ನಾಂಕ 24 ರಂದು ನಗರದ ಕೃಷ್ಣಮಠ ಸಭಾಂಗಣದಲ್ಲಿ ಜರುಗಿದೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) ಸಂಸ್ಕøತ ಭಾಷೆಯ ಸಾಧಕರಿಗೆ ಕೊಡಮಾಡಲಾಗುವ ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಮಾರಂಭದಲ್ಲಿ ಮುಖ್ಯ ವಕ್ತಾರರಾದ ಅವರು ರಾಮಸಿಂಗ್ ರಜಪೂತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತಾಡಿದರು.
ಗುರುಕುಲ ಎಂದರೆ ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ ಎಲ್ಲ ಸಮಾಜಗಳಿಗೆ ಅವರದ್ದೇಯಾದ ಗುರುಕುಲಗಳು ಇರುತ್ತಿದ್ದವು. ಬ್ರಿಟಿಷ್‍ರು ನಮ್ಮ ಭಾರತೀಯ ಗುರುಕುಲ ಪದ್ದತಿಯನ್ನು ನಾಶಮಾಡಿದರು. ಇಂದು ವಿಜ್ಞಾನಿಗಳು ಏನು ಹೇಳುತ್ತಾರೋ ಅವುಗಳನ್ನು ನಮ್ಮ ಪೂರ್ವಜರು ಈ ಮೊದಲೇ ಆಯುರ್ವೇದ, ವೇದಗಳ, ಶಾಸ್ತ್ರಗಳ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಇಂದು ಕೆಲವರು ಉದ್ದೇಶ ಪೂರ್ವಕವಾಗಿ ಸಂಸ್ಕೃತ ಭಾಷೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಕೃತ ಭಾಷೆಯನ್ನು ಒಂದು ಸಮುದಾಯಕ್ಕೆ ತಳಕುಹಾಕಿ ಸಂಸ್ಕøತ ಭಾಷೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಹುನ್ನಾರಗಳು ಈಡೇರಲಾರುವು ಎಂದು ಈ ಸಂದರ್ಭದಲ್ಲಿ ಹೇಳಿದರು.
2022 ನೇ ಸಾಲಿನ ಮಹಾಮಹೋಪಾಧ್ಯಯ ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿ ಪುರಸ್ಕೃತ ನಗರದ ಗಣ್ಯ ವ್ಯಾಪಾರಿ ರಾಮಸಿಂಗ ರಜಪೂತ ಮಾತನಾಡಿ ‘ಸಂಸ್ಕೃತ ಭಾಷೆ ಕಲಿಕೆಗೆ ವ್ಯಾಕರಣ ಬೇಕಿಲ್ಲ, ರೂಢಿ ಇಚ್ಛಾ ಶಕ್ತಿ ಅವಶ್ಯಕವಿದೆ. ಎಲ್ಲ ಭಾಷೆಕ್ಕಿಂತಲೂ ಸಂಸ್ಕೃತ ಭಾಷೆ ಕಲಿಯುವುದು ಸರಳ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ವಿದ್ವಾನ್ ರಂಗನಾಥ ಶರ್ಮ ಜೀವನಗಾಥೆ, ಪ್ರಶಸ್ತಿ ಹಿನ್ನಲೆ, ಇಲ್ಲಿಯವರೆಗಿನ ಪ್ರಶಸ್ತಿ ಪುರಸ್ಕೃತರ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಜಿ ಕೋಟೆ ಸಂಸ್ಕೃತ ಬಳಕೆ ಇಲ್ಲದೆ ಸಾಹಿತ್ಯ ರಚನೆ ಅಸಾಧ್ಯವೆಂದು ಹಾಗೂ ಕಾರ್ಯಕ್ರಮ ಅಚ್ಚುಕಟ್ಟಾಗಿ ಏರ್ಪಾಟು ಮಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ)ವಿಜಯಪುರ ಜಿಲ್ಲಾ ಸಮಿತಿಯ ಸದಸ್ಯರುಗಳನ್ನು ಅಭಿನಂದಿಸಿದರು.ಗೀತಾ ವೈದ್ಯ ಪ್ರಾರ್ಥನೆ, ರಾಹುಲ್ ಮರಳಿ, ರವಿ ಹಕ್ಕಿ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) ವಿಜಯಪುರ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ, ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಶ್ರೀಶ ಹುಟಗಿ, ಶ್ರೀರಂಗ ಪುರಾಣಿಕ, ರಾಘವೇಂದ್ರ ಕುಲಕರ್ಣಿ, ಡಾ.ಕೃಷ್ಣ ಅಗರಖೇಡ, ಪ್ರಿಯಾ ಪಾ ಹರಿದಾಸ, ರಘೋತ್ತಮ ಅರ್ಜುಣಗಿ, ಜಿ ಆರ್ ಕುಲರ್ಣಿ, ಅರುಣ ಮರಳಿ, ಅಶೋಕ ಕಾರಜೋಳ, ದಿಗಂಬರ ಪಾಟೀಲ, ಪ್ರಶಾಂತ ಜಂಬಗಿ, ನೇತಾಜಿ ಸರ್ವೇ ಮುಂತಾದವರು ಪಾಲ್ಗೊಂಡಿದ್ದರು.