ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದಿಂದ ವಿಜ್ಞಾನ ಮೇಳ

ಕಲಬುರಗಿ,ನ 18: ಅಫಜಲಪುರ ತಾಲೂಕಿನ ಅತನೂರ್ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿಂದು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ವಿದ್ಯಾರ್ಥಿಗಳಾಗಿ ವಿಜ್ಞಾನ ಮೇಳ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾದ ಗಿರೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವೇಳೆಯಲ್ಲಿ ಅಗಸ್ತ್ಯ ಫೌಂಡೇಶನ್ ಅಫಜಲಪುರ ವಲಯ ಮುಖ್ಯಸ್ಥರಾದ ಮಲ್ಲಪ್ಪ ಮುಷ್ಟಿಹಳಿ ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯ ಮುಖ್ಯ ಗುರುಗಳಾದ ಬಸನಗೌಡ ಬಿರಾದರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ್ ಮಾತನಾಡಿದ ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆ ಯಿಂದ ಮಣ್ಣಿನ ಫಲವತ್ತೆ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಗಸ್ತ್ಯ ವಲಯ ಮುಖ್ಯಸ್ಥರಾದ ಮಲ್ಲಪ್ಪ ಮುಷ್ಟಿಹಳಿ ಮಾತನಾಡಿ ವಿಜ್ಞಾನದ ಮೇಳದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಸೃಜನಶೀಲತೆ ಕುತೂಹಲ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿರುವ ಬಸನಗೌಡ ಮಕ್ಕಳಲ್ಲಿ ಸೃಜನಶೀಲತೆ ಬಗ್ಗೆ ತಿಳಿಸಿದರು. ಸಹ ಶಿಕ್ಷಕರಾದ ಆನಂದ್, ಹಣಮಂತ ಭೀಮಣ್ಣ ಪ್ರಕಾಶ್ ಹಟ್ಟಿ ದೈಹಿಕ ಶಿಕ್ಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.