ಅಗಸ್ಟ್ 12 ಕ್ಕೆ ಗಾಳಿಪಟ-2 ತೆರೆಗೆ

ಹುಬ್ಬಳ್ಳಿ,ಜು19 : ಸೂರಜ್ ಪೆÇ್ರಡಕ್ಷನ್ ಬ್ಯಾನರ್ ಅಡಿ ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ ನಟನೆಯ ಬಹು ನಿರೀಕ್ಷೆಯ ಚಿತ್ರ ಅಗಸ್ಟ್ 12 ರಂದು ಗಾಳಿಪಟ – 2 ಚಲನಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಚಕ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ ಹಾಗೂ ಭೂಷನ್ ಅವರು ಮೂವರು ಸ್ನೇಹಿತರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಮಿಡಿ, ಪ್ರೀತಿ ಹಾಗೂ ಸ್ನೇಹದ ವಿಷಯಗಳನ್ನು ಹೊಂದಿರುವ ಈ ಚಿತ್ರವು ಈಗಾಗಲೇ ಹಾಡನ್ನು ಬಿಡುಗಡೆ ಮಾಡಿದ್ದು, ಜನಪ್ರಿಯತೆ ಪಡೆದಿದ್ದು, ಉಳಿದ ಹಾಡುಗಳು ಬಿಡುಗಡೆಗೆ ಸಿದ್ಧತೆಗೊಂಡಿವೆ ಎಂದು ಹೇಳಿದರು.
ಇನ್ನೂ ಚಿತ್ರದಲ್ಲಿ ಹಿರಿಯ ನಟ ಅನಂತನಾಗ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ರಂಗಾಯಣ ರಘು, ನಿಶ್ವಿಕ ನಾಯ್ಡು, ಸುಧಾ ಬೆಳವಡಿ, ಬುಲೆಟ್ ಪ್ರಕಾಶ ಅಭಿನಯಿಸಿದ್ದಾರೆ.
ಚಿತ್ರದ ಸಂಗೀತ ಸಂಯೋಜನೆಯನ್ನು ಅರ್ಜುನ್ ಜನ್ಯ, ಛಾಯಾಗ್ರಹಣವನ್ನು ಸಂತೋಷ ಪಾತಾಜೆ, ಚಿತ್ರದ ನಿರ್ಮಾಣವನ್ನು ಉಮಾ.ಎಂ. ರಮೇಶ ರೆಡ್ಡಿ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಮಿಡಿ ಕಿಲಾಡಿ ಮನು ಉಪಸ್ಥಿತರಿದ್ದರು.