ಅಗಷ್ಟ 8 ಸಿದ್ರಾಮೇಶ್ವರ ಗದ್ದುಗೆಗೆ ರುದ್ರಾಭಿಷೇಕ

ಶಹಾಪುರ :ಆ.6: ತಾಲ್ಲೂಕಿನ ಸಗರ ಗ್ರಾಮದ ದೇಸಾಯಿ ಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಮಹಾತ್ಮ ಸಿದ್ಧರಾಮೇಶ್ವರ ಸ್ವಾಮಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ’ಸಹಸ್ರ ಬಿಲ್ವಾರ್ಚನೆ,ಪಂಚಾಭಿಷೇಕ ಕಾರ್ಯಕ್ರಮ ಹಾಗೂ ಧರ್ಮ ಸಭೆಯನ್ನು ಶ್ರಾವಣ ಮಾಸದ ನಿಮಿತ್ಯವಾಗಿ ಎರಡನೇ ಶ್ರಾವಣ ಸೋಮವಾರ ಹಮ್ಮಿಕೆuಟಿಜeಜಿiಟಿeಜಳ್ಳಲಾಗಿದೆ ಎಂದು ವಿಶ್ವಾರಾಧ್ಯ ಸ್ವಾಮಿ ದೇಸಾಯಿಮಠ ಪ್ರಕಟಣೆಗೆ ತಿಳಿಸಿದ್ದಾರೆ.
ಕಡಕೋಳ ಮಡಿವಾಳೇಶ್ವರ ಮಠದ ಶ್ರೀಗಳಾದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು, ಒಕ್ಕಲಗೇರಿ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿಕೊಳ್ಳುವರು,ಚಿಣಮಗೇರಿಯ ಮಹಾಂತೇಶ್ವರ ಮಠದ ಪೂಜ್ಯರಾದ ವೀರಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಉಪದೇಶ ಮಾಡುವರು,ಹಾಗೂ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಕ್ಕನಬಳಗ ಮಠದ ಶರಣಮ್ಮ ತಾಯಿ,ವೇದಮೂರ್ತಿ ಬಸಯ್ಯಸ್ವಾಮಿಗಳು, ಚನ್ನಮಲ್ಲಿಕಾರ್ಜುನಸ್ವಾಮಿ,ಗುರು ಕುಮಾರೇಶ್ವರ ಮಹಾಸ್ವಾಮಿಗಳು, ಶ್ರೀ ಗುರುಪಾದಯ್ಯ ಮಹಾಸ್ವಾಮಿಗಳು, ಚನ್ನೂರು ರೇವಣಸಿದ್ಧೇಶ್ವರ ಮಠದ ಶ್ರೀಗಳು ವೇದಿಕೆ ಮೇಲೆ ಅತಿಥಿಗಳಾಗಿ ಭಾಗವಹಿಸುವರು.ನಂತರದಲ್ಲಿ ವೇದಮೂರ್ತಿ ಗುರುಸ್ವಾಮಿ ಕಡಗುಡ ಮಠ ಇವರಿಂದ ವೈದಿಕತ್ವ ನೆರವೇರುವುದು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.