ಅಗಲಿದ ಹಿರಿಯ ಪತ್ರಕರ್ತ ಕಾಗಲಕರರಿಗೆ ಶ್ರದ್ದಾಂಜಲಿ ಅರ್ಪಣೆ

ಶಹಾಪುರ:ಮೇ.17:ಮೂರು ದಶಕಗಳ ಕಾಲ ಪತ್ರಿಕ್ಯೋಧ್ಯಮದಲ್ಲಿ ಅವಿರತ ಶ್ರಮಿಸಿದ್ದ.ಸಹೃದಯದ ಸಜ್ಜನಿಕೆಗೆ ಹೆಸರು ಮಾಡಿದ್ದ.ಸಂಯುಕ್ತ ಕರ್ನಾಟಕ ಕಲಬುರ್ಗಿ ಅವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಲ್ಯಾಣ ಕರ್ನಾಟಕದ ಹಿರಿಯ ಪತ್ರಕರ್ತ ಜಯತಿರ್ಥ ಕಾಗಲಕರ್ ರವರಿಗೆ ಶಹಾಪುರ ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘ ಭಾವ ಪೂರ್ಣ ಶ್ರದ್ದಾಂಜಲಿ ಅರ್ಪಿಸಿತು. ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಎರ್ಪಡಿಸಲಾದ ಸರಳ ಶ್ರದ್ದಾಂಜಲಿ ಸಭೆಯಲ್ಲಿ ಸಕಲ ಪತ್ರಕರ್ತರು ಅಗಲಿದ ಹಿರಿಯ ಜೀವ ಕಾಗಲಕರವರಿಗೆ ಆತ್ಮಕ್ಕೆ ಚೀರಾ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಮಯದಲ್ಲಿ ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾರಾಯಣಚಾರ್ಯ ಸಗರವರು ಮಾತನಾಡಿ.ದಿ,ಜಯತಿರ್ಥ ಕಾಗಲಕರವರು ಕೇವಲ ಪತ್ರಕರ್ತರಾಗಿರದೆ ನಾನಾ ಕ್ಷೇತ್ರಗಳ ಅವಿನಾಭಾವ ಸಂಭಂಧದ ಬೇಸುಗೆಯಾಗಿದ್ದರು. ಅವರ ಆತ್ಮೀಯತೆಗಳು ಬದುಕಿನ ಮಾರ್ಗಗಳಿಗೆ ಪೂರಕವಾಗುವ ಶಕ್ತಿಯಸ್ವರೂಪತೆಗಳನ್ನು ಮೈಗೂಡಿಸಿಕೊಂಡಿದ್ದರು. ಮೂವತ್ತು ವರ್ಷಗಳ ಪತ್ರಿಕಾ ರಂಗದ ಪಯಣದ ಮೈಲುಗಲ್ಲುಗಳನ್ನು ಮೇಟ್ಟಿ ನಿಂತ ಕಾಗಲಕರವರು ಅತ್ಯಂತ ಸರಳ ಜೀವಿಗಳಾಗಿ ಮಾದಿರಯಾದರು. ಕಾಗಲಕರವರ ಕಳೆದುಕೊಂಡ ಪತ್ರಿಕಾ ರಂಗ ಬಡವಾಗಿದ್ದು ದುಃಖದ ಸಂಗತಿಯಾಗಿದೆ. ಪತ್ರಿಕಾ ಕ್ಷೇತ್ರದಲ್ಲಿರುವರು ಒಂದೆ ಕುಟುಂಬಸ್ಥರಂತೆ ಕಾಣುವ ಮನೋಭಾವನೆಗಳೊಂದಿಗೆ ಪರಸ್ಪರ ಸಹಕಾರಗಳಿಂದ ಬೇರತುಕೊಳ್ಳಬೇಕಿದ್ದು. ಆತಂಕದ ಕಾಲಘಟ್ಟದಲ್ಲಿರುವ ನಾವುಗಳು ಜಾಗ್ರತೆಗಳಿಂದ ಮುನ್ನಡೆಯಬೇಕು ಎಂದು ಅವರು ಅವರು ಮನವರಿಕೆ ಮಾಡಿದರು. ಈ ಶ್ರದ್ದಾಂಜಲಿ ಸಭೆಯಲ್ಲಿ ಆಶ್ರೆಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರುಪುರಕರ್.ಪತ್ರಕರ್ತರಾದ ಅಮರೇಶ ಹೀರೆಮಠ.ಈರಣ್ಣ ಹಾದಿಮನಿ, ಮಲ್ಲಿಕಾರ್ಜುನ ಮುದನೂರ. ಭೀಮಾಶಂಕರ ದೊಡಮನಿ,ನಾಗೇಂದ್ರ ಸಿಂಗ್ ಟಾಕೋರ್. ಈರಣ್ಣ ಮೌರ್ಯ.ಮಲ್ಲಯ್ಯ ಪೊಲಂಪಲ್ಲಿ, ವೆಂಕಟೇಶ ಆಲೂರ.ಬಸವರಾಜ ಕರೆಗಾರ.ಮತ್ತು ಎಸ್,ಎಸ್,ಡಿ, ತಾಲುಕಾ ಅಧ್ಯಕ್ಷರಾದ ಶರಣಪ್ಪ ಅನಸಕೂಗೂರ ರವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಪತ್ರಕರ್ತರಾದ ಬಸವರಾಜ ಸಿನ್ನೂರವರು ಕಾರ್ಯಕ್ರಮ ನೀರೂಪಿಸಿ ವಂದಿಸಿದರು.ಪತ್ರಕರ್ತರಾದ ಮಹೇಶ ಪತ್ತಾರವರು ಸಿ ಅಶ್ವತರವರ ದ್ವನಿಯಲ್ಲಿರುವ ಕಾಣದ ಕಡಲಿಗೆ ಅಂಬಲಿಸಿದೆ ಮನ!! ಎನ್ನವ ಹಾಡನ್ನು ಹಾಡಿ ನಮನ ಸಲ್ಲಿಸಿದರು.ಈ ಸಂಧರ್ಭದಲ್ಲಿ ಮೌನಾಚರಣೆ ಮಾಡುವದರೊಂದಿಗೆ ಗೌರವರ್ಪಣೆ ಮಾಡಲಾಯಿತು.


ಹಿರಿಯ ಪತ್ರಕರ್ತ ಜಯತಿರ್ಥ ಕಾಗಲಕರವರ ಅಗಲಿಕೆ ಸಾಹಿತ್ಯ ಮತ್ತು ಪತ್ರಿಕಾಲೋಕಕ್ಕೆ ತುಂಬಲಾಗದ ನಷ್ಟವಾಗಿದ್ದು. ಅವರು ನೆನಪು ಸದಾ ಪತ್ರಿಕಾ ರಂಗದಲ್ಲಿ ಹಜರಾಮರವಾಗಿರಲೇಂದು ಭಯಸುತ್ತಾ ಅಗಲಿದ ಕಾಗಲಕರವರ ಆತ್ಮಕ್ಕೆ ಭಗವಂತ ಚೀರಾ ಶಾಂತಿ ನೀಡಲಿ ಎಂದು ತಾಲುಕಾ ಕಸಾಪ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ.ಸಾಹಿತಿ ಸಿದ್ರಾಮ ಹೊನಕಲ್, ಡಾ,ಅಬ್ದುಲ್ ಕರೀಮ ಕನ್ಯಾಕೊಳೂರ. ಭಾವ ಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಪ್ರಾರ್ಥಿಸಿದ್ದಾರೆ.