ಅಗಲಿದ ರಂಗಕರ್ಮಿ ಕಲಾವಿದ ಎಲ್‍ಬಿಕೆ ಅಲ್ದಾಳ್‍ಗೆ ನುಡಿನಮನ

ವಾಡಿ:ಎ.16: ಪಟ್ಟಣದ ಡಾ. ಅಂಬೇಡ್ಕರ್ ಸ್ಮಾರಕ ಭವನದಲ್ಲಿ, ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಾಡಿ ವಲಯ ವತಿಯಿಂದ ಅಗಲಿದ ಸಾಹಿತಿ, ರಂಗಭೂಮಿ ಕಲಾವಿದ ಎಲ್‍ಬಿಕೆ ಅಲ್ದಾಳ್‍ರಿಗೆ ನುಡಿನಮನ ಸಲ್ಲಿಸಲಾಯಿತ್ತು.

ಕಸಾಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಮಾತನಾಡಿ, ಜನರ ಮಧ್ಯೆಯೇ ಇದ್ದು ನಾಟಕ ರಚನೆ ಮಾಡುತ್ತಿದ್ದ, ಅಲ್ದಾಳ್‍ರು ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿಯಾದ್ದರು. 100ಕ್ಕೂ ಅಧಿಕ ನಾಟಕಗಳನ್ನು ಬರೆದ ಅವರು ಸರ್ಕಾರ ಕೆಲವೊಂದು ಪ್ರಶಸ್ತಿಗಳಿಗೆ ಮಾತ್ರ ಭಾಜನರಾಗಿದ್ದಾರೆ. ಬೃಹತ ಮಟ್ಟಕ್ಕೆ ಬೆಳೆದಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಗುರುತಿಸುವ ಕೆಲಸ ಮಾಡಬೇಕಿದೆ ಎಂದರು.

ಗಜಲ್ ಕವಿ ಡಾ. ಮಲ್ಲಿನಾಥ ತಳವಾರ ಮಾತನಾಡಿ, ರಂಗಭೂಮಿ ಕಲಾವಿದರು ದುರಾಭ್ಯಾಸ, ದುಷ್ಚಟ್ಟಗಳಿಗೆ ಬಲಿಯಾಗಿ ತನ್ನ ಸರ್ವಸ್ವವನ್ನು ಕಳೆದುಕೊಂಡು ಬೀದಿಗೆ ಬಂದಿರುವ ಘಟನೆಗಳು ನಡೆಯುತ್ತವೆ. ಆದರೆ, ಅಲ್ದಾಳ್ರು, ರಂಗಭೂಮಿ ಕಟ್ಟಿ ಬೆಳೆಸಲು ತನ್ನ 3 ಎಕರೆ ಹೊಲವನ್ನು ಮಾರಿ ರಂಗಭೂಮಿ ಸಜ್ಜುಗೊಳಿಸುತ್ತಾರೆ. ಹೆಸರು ಗಳಿಸಬೇಕು, ದುಡ್ಡು ಮಾಡಬೇಕು ಎನ್ನುವ ಮನೋಭಾವ ಅವರಲ್ಲಿ ಇರಲ್ಲಿಲ್ಲ. ಮಠಗಳೇ ಅವರಿಗೆ ಆಶ್ರಯ ತಾಣವಾಗಿದ್ದವು. ಜನಪರಿಸರದಲ್ಲಿ ಪೌರಾಣಿಕ ನಾಟಕಗಳನ್ನು ಸಿದ್ದಪಡಿಸಿ ವೇದಿಕೆಯ ಎದುರು ಕುಂತು ನೋಡುವ ಸರಳ ಸಜ್ಜನಿಕೆ ವ್ಯಕ್ತಿತ್ವ ಅವರದಾಗಿತ್ತು ಎಂದು ತಿಳಿಸಿದರು.

ಸಂಚಲನ ಸಾಹಿತ್ಯ ನಿಕಟಪೂರ್ವ ಅಧ್ಯಕ್ಷ ಮಡಿವಾಳಪ್ಪ ಹೇರೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಲನ ಅಧ್ಯಕ್ಷ ವೀಕ್ರಂ ನಿಂಬರ್ಗಾ ಅಧ್ಯಕ್ಷೀಯ ನುಡಿಯನ್ನಾಡಿದರು. ಕಾರ್ಯದರ್ಶಿ ಶ್ರವಣಕುಮಾರ ಮೌಸಲಗಿ, ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಖಜಾಂಚಿ ಮಲಿಕಪಾಶಾ ಮೌಜನ್, ಬರಹಗಾರರಾದ ಮಲ್ಲೇಶಿ ನಾಟೇಕರ್, ವೀರಣ್ಣ ಯಾರಿ, ರವಿ ಕೊಳ್ಕುರ್, ರಾಯಪ್ಪ ಕೊಟಗಾರ್, ದೇವಿಂದ್ರ ದೊಡ್ಡಮನಿ ಇದ್ದರು.