ಅಗಲಿದ ನಾಯಕನಿಗೆ ಶೃದ್ಧಾಂಜಲಿ

ಚನ್ನಮ್ಮನ ಕಿತ್ತೂರ,ಏ 26: ಧೀಮಂತ ನಾಯಕ, ಮಾಜಿ ಸಚಿವ ಡಿ.ಬಿ.ಇನಾಮದಾರವರ (74) ನಿಧನಕ್ಕೆ ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ತೀವ್ರ ಸಂತಾಪ ಸೂಚಿಸಿದ್ದಾರೆ.
ಕ್ಷೇತ್ರದ ಜನತೆ ನೋವಿನ ಕಂಬನಿ ಮಿಡಿಯುತ್ತಿದ್ದು, ಅವರ ಅಗಲಿಕೆಯ ನೋವನ್ನು ಮರೆಯುವಂತ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಆ ಭಗವಂತ ಕರುಣಿಸಲೆಂದು ಅವರು ಸಂತಾಪ ಸೂಚಿಸಿದ್ದಾರೆ.
ಇನಾಮದಾರ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿ ಅವರು, ಇನಾಮದಾರರವರು ಕಿತ್ತೂರಿನ ಹಿರಿಯ ಕಾಂಗ್ರೇಸ್ ರಾಜಕಾರಣಿ, 5 ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಇಂದಿರಾಗಾಂಧಿಯವರೊಂದಿಗೆ ಒಡನಾಟ ಹೊಂದಿದ ಇವರು ಬೆಳಗಾವ ಜಿಲ್ಲೆ ಹಿರಿಯ ನಾಯಕರಾಗಿದ್ದರು ಎಂದು ಹೇಳಿದರು.
ಈ ವೇಳೆ ಹಿರಿಯರಾದ ಪ್ರಕಾಶ ಮೂಗಬಸವ, ಯುವಕರು ಸೇರಿದಂತೆ ಗ್ರಾಮಸ್ಥರಿದ್ದರು.