ಅಗಲಿದ ನಟ ಪುನೀತ್ ಗೆ ಪ್ರತಿಷ್ಠಿತ ಬಸವಶ್ರೀ ಘೋಷಣೆ

ಬೆಂಗಳೂರು, ನ.4- ಕಳೆದ ವಾರ ಹೃದಯಾಘಾತದಿಂದ ಅಗಲಿ್ದದ ಪವರ್ ಸ್ಟಾರ್ ಪುನೀತ್ ಕುಮಾರ್ ಅವರಿಗೆ ಪ್ರತಿಷ್ಠಿತ ” ಬಸವಶ್ರೀ ” ಪ್ರಶಸ್ತಿ ಘೋಷಿಸಿಸಲಾಗಿದೆ.

2022 ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನೀಡಲು ನಿರ್ದರಿಸಲಾಗಿದೆ ಎಂದು ಚಿತ್ರದುರ್ಗ ಮುರುಘ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದ್ದಾರೆ.

ಮುಂದಿನ ವರ್ಷದ ಬಸವ ಜಯಂತಿದಂದು ಬಸವಶ್ರೀ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಶಸ್ತಿಯು ಐದು ಲಕ್ಷ ನಗದು ,ಪುರಸ್ಕಾರ ಒಳಗೊಂಡಿದೆ. ಕಾರ್ಯಕ್ರಮಕ್ಕೆ ಹಿರಿಯ ನಟ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಅವರಿ್ಡಗೆ, ರಾಜ್ಯೋತ್ಸವ ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹ ಕೇಳಿ ಬಂದಿರುವ ನಡುವೆ ಚಿತ್ರದುರ್ಗದ ಮುರುಘಾ‌ಮಠ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರಕಟಿಸಿದೆ.

ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ‌ ಖುಷಿಗೆ ಕಾರಣವಾಗಿದೆ.