ಅಗಲಿದ ಉದ್ಯಮಿ ಸಂತೋಷ್ ಮಡ್ತಿಲರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ಸುಳ್ಯ , ಜ.೭- ಅಗಲಿದ ಉದ್ಯಮಿ, ಸಂಘಟಕ ಸಂತೋಷ್ ಮಡ್ತಿಲ ಅವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆಯು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಬಯಲು ರಂಗ ಮಂದಿರದಲ್ಲಿ ನಡೆಯಿತು.
ಸಂತೋಷ್ ಮಡ್ತಿಲ ಸಾರ್ವಜನಿಕ ಶ್ರದ್ಧಾಂಜಲಿ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಸಂತೋಷ್ ಮಡ್ತಿಲ ಭಾವಚಿತ್ರದೆದುರು ದೀಪ ಬೆಳಗಿಸಿ ಮಾತನಾಡಿ, ವ್ಯಕ್ತಿಗತವಾಗಿಯೂ ಒಳ್ಳೆಯ ಗುಣ ನಡತೆಗಳಿಂದ ಜನರ ಪ್ರೀತಿಗೆ ಪಾತ್ರರಾದ ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ., ಸ್ವಯಂ ಶಕ್ತಿಯಿಂದ ಬೆಳೆದು ಸಾಧನೆಗಳ ಸರದಾರರಾದ ಸಂತೋಷ್ ಪರೋಪಕಾರದ ದೊಡ್ಡ ವ್ಯಕ್ತಿತ್ವವಾಗಿದ್ದರು. ಯುವ ಜನತೆಗೆ ಅವರು ಶಕ್ತಿ ಮತ್ತು ಪ್ರೇರಣಾ ಶಕ್ತಿಯಾಗಿದ್ದರು ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಸಂತಾಸ ಸಭೆ ಅಧ್ಯಕ್ಷ ಎನ್.ಎ.ಜ್ಞಾನೇಶ್, ಡಾ. ಪ್ರಭಾಕರ್ ಶಿಶಿಲ, ಎ.ಒ.ಎಲ್.ಇ ನಿರ್ದೇಶಕ ಅಕ್ಷಯ ಕೆ.ಸಿ, ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ, ಚಂದ್ರಾಕೋಲ್ಚಾರ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪಿ.ಬಿ.ಸುಧಾಕರ್ ರೈ, ಕೆ.ಆರ್.ಗಂಗಾಧರ್, ಡಿ.ಎಸ್.ಗಿರೀಶ್, ದೊಡ್ಡಣ್ಣ ಬರೆಮೇಲು, ಚಂದ್ರಶೇಖರ್ ಪೇರಾಲು, ಪಿ.ಎಸ್.ಗಂಗಾಧರ್, ಪಿ.ಸಿ.ಜಯರಾಮ್, ಕೆ.ಟಿ.ವಿಶ್ವನಾಥ, ದೀಪಕ್ ಕುತ್ತಮೊಟ್ಟೆ, ಸರೋಜಿನಿ ಪೆಲ್ತಡ್ಕ, ಜಿ.ಜಿ.ನಾಯಕ್, ಹರೀಶ್ ರೈ ಉಬರಡ್ಕ, ಎನ್.ಎ.ರಾಮಚಂದ್ರ,
ಸಂತೋಷ್ ಜಾಕೆ ಮೊದಲಾದವರು ಉಪಸ್ಥಿತರಿದ್ದರು.

Spread the love