ಅಗರಖೇಡ ಗ್ರಾಮದಲ್ಲಿ ಡಾ,ಬಾಬಾಸಾಹೇಬ ಅಂಬೇಡ್ಕರ್ ರ 65ನೇ ಮಹಾ ಪರಿನಿರ್ವಾಹಣ ದಿನ ಆಚರಣೆ

(ಸಂಜೆವಾಣಿ ವಾರ್ತೆ)
ಇಂಡಿ: ಡಿ.8:ಮುದ್ದು ಮಕ್ಕಳಿಂದ ಡಾ, ಬಾಬಾಸಾಹೇಬ ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಹಣ ದಿನ ವನ್ನು ಅಗರಖೇಡ ಗ್ರಾಮದ
ಡಾ,ಅಂಬೇಡ್ಕರ್ ವ್ರತ್ತ ದಲ್ಲಿ ಮೇಣದ ಬತ್ತಿ ಹಚ್ಚುವುದರ ಮುಖಾಂತರ ಅವರಿಗೆ ನಮನಗಳು ಸಲ್ಲಿಸಿದರು. ಸಮಾಜ ಮಂದಿರ ದಿಂದ ಡಾ, ಅಂಬೇಡ್ಕರ್ ವ್ರತ್ತದ ವರೆಗೆ ಮೇಣದ ಬತ್ತಿ ಹಚ್ಚಿಕೊಂಡು ಬುದ್ಧಮ್ ಶರಣಂ ಗಚಾಮಿ ಎಂಬ ಬುದ್ಧ ನ ಮಂತ್ರ ಜಫೀಸುತ ಬಾಬಾಸಾಹೇಬರಿಗೆ ವಿಶಿಷ್ಟ ವಾಗಿ ನಮನಗಳು ಸಲ್ಲಿಸಿದರು.
ಸಮಾಜದ ಎಲ್ಲ ಹಿರಿಯರು ಕೂಡ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದರು. ಡಾ, ಅಂಬೇಡ್ಕರ್ ಕಮಿಟಿ ಅಧ್ಯಕ್ಷ ರವಿ ಮೇಲಿನಮನಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲ ಡೋಳ್ಳೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುನಿಲ್ ಬನಸೋಡೆ, ಕಮಿಟಿಯ ಸರ್ವ ಸದಸ್ಯರು ಹಾಜರಿದ್ದರು.