ಅಗರಖೇಡ ಗಡಿಭಾಗದ ಭೀಮಾ ನದಿ ಬ್ರೀಡ್ಜ ಸಂಪೂರ್ಣ ಬಂದ್

ಇಂಡಿ:ಮೇ.1: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಮಹಾಮಾರಿಯ ರುದ್ರನರ್ತಕ್ಕೆ ರಾಜ್ಯ ಬೆಚ್ಚಿ ಬಿದ್ದಿದೆ. ಈ ಸೋಂಕನ್ನು ತಡೆಹೀಡಿಯುವ ಉದ್ದೇಶದಿಂದ ಮುಂಜಾಗ್ರತ ಕ್ರಮವಾಗಿ. ಸರಕಾರದ ಆದೇಶದಂತೆ ಎರಡು ವಾರಗಳ ಕಾಲ ಇಂಡಿ ತಾಲೂಕಿನ ಅಗರಖೇಡ ಹೊರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಭೀಮಾ ನದಿ ಬ್ರೀಡ್ಜ ನೆರೆಯ ಮಹಾರಾಷ್ಟ್ರ ಹಾಗೂ ಕಲಬುರ್ಗಿ ಜಿಲ್ಲೆಗೆ ಕಲ್ಪಿಸುವ ಎಕೈಕ ಮಾರ್ಗ ಇಂದು ಮದ್ಯಹ್ನ ಇಂಡಿ ಗ್ರಾಮೀಣ ಪೊಲೀಸ ಠಾಣೆ ಪಿ,ಎಸ್,ಆಯ್, ಶ್ರೀ ಮಾಳಪ್ಪ ಪೊಜಾರಿ ಸಂಪೂರ್ಣ ಬಂದ್ ಮಾಡಿದ್ದಾರೆ. ಇದರಿಂದ ಸ್ಥಳಿಯ ಮಣ್ಣೂರ ಗ್ರಾಮದ ಗ್ರಾಮಸ್ಥರು ಬೈಕ್ ಹೊಗುವಷ್ಟು ದಾರಿ ಬಿಡಲು ತಮ್ಮ ಅಳಿಲು ತೋಡಿಕೋಂಡರು ಆದರೆ ಯಾವುದೆ ಪ್ರಯೋಜನೆವಾಗಲಿಲ್ಲ.ನಿಗದಿ ಪಡಿಸಿದ ಸಮಯದ ವರೆಗೆ ಲಾಕ್ ಡೌನ್ ಮುಂದೆ ವರಿಸಿಲು ತಮ್ಮ ಸಹಕಾರ ಅತೀ ಅವಶ್ಯಕತೆ ಇದೆ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಈ ಸಂರ್ಭದಲ್ಲಿ ಉಪಾಸ್ಥಿತರಾದ ಗುಡುಸಾಬ ರೆವೂರ ಉಪಾಧ್ಯಕ್ಷ ಗ್ರಾ ಪಂ ಗುಬ್ಬೆವಾಡ, ರವಿ ಪಾದಗಟ್ಟಿ, ವ್ಹಿ ಎಸ್ ಹಿಟ್ನಳ್ಳಿ, ಪ್ರವೀಣ ಭಾವಿಮನಿ, ಹವಾಲ್ದಾರ ನಾಗರಾಜ ಜೆವೂರ, ಸಂದೀಪ ಶಿವೂಣಗಿ, ಗೃಹರಕ್ಷಕ ಧಳದ ಸಿಬ್ಬಂದಿ ಎಲ್, ಎಮ್, ಹಿರೇಕೂರಬರ, ಎಚ್ ಎಲ್, ಪೂಜಾರಿ ಹಾಗೂ ಗ್ರಾಮಸ್ಥರು ಇದ್ದರು.