ಅಗರಖೇಡದಲ್ಲಿ ಧರ್ಮಸ್ಥಳ ಶ್ರಿ ಮಂಜುನಾಥ ಸಂಘದಿಂದ ಮಾಶಾಸನ

(ಸಂಜೆವಾಣಿ ವಾರ್ತೆ)
ಇಂಡಿ,ಜ.11: ತಾಲೂಕಿನ ಅಗರಖೇಡ ಗ್ರಾಮದಲ್ಲಿ ಶ್ರಿ ಭೈರಸಿದ್ದ ದೇವಸ್ಥಾನದಲ್ಲಿ ಧರ್ಮಸ್ಥಳ ಶ್ರಿ ಮಂಜುನಾಥ ಸ್ವಸಾಯ ಸಂಘದವತಿಯಿಂದ ಗ್ರಾಮದಲ್ಲಿನ ವಯಸ್ಸಾದ ಹಾಗೂ ನಿರ್ಗತಿಕ ಮಹಿಳೆಯರನ್ನು ಗುರ್ತಿಸಿ. ಗ್ರಾಮದ ಶ್ರಿ ಭೈರಸಿದ್ದ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅತೀ ಬಡವರು ವಯಸ್ಸಾದವರು ನಿಶಕ್ತರು ಆಶ್ರಯಿಲ್ಲದ ನಿರ್ಗತಿ ಮಹಿಳೇಯರನ್ನು ಕರೆಸಿ ಅವರ ಉಪಜೀವನಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಅವರಿಗೆ ಮಾಶಾಸನ(ಪಿಂಚಣಿ)ಪ್ರತಿ ತಿಂಗಳು ಜಿವಿತಾಅವದಿವರೆಗೆ, ಹಾಗೂ ಜಮಖಾನೆ, ಚಾದರ, ದಿಂಬುಗಳ ಉಳ್ಳ ಕಿಟ್ಟಗಳನ್ನು ವಿತರಿಸಿದರು. ಈ ಸಭೆಯ ಮುಖ್ಯಅತಿಥಿಗಳಾಗಿ ಆಗಮಿಸಿದ ಶ್ರಿ ವಿಠ್ಠಲಗೌಡ ಕಲ್ಲಪ್ಪಗೌಡ ಪಾಟೀಲ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಗ್ರಾಮ ಪಂ ಅಗರಖೇಡ. ಮಾತನಾಡಿ. ಸರಕಾರದಿಂದ ಸಿಗಬೇಕಾದÀ ಸೌಲಭ್ಯಗಳನ್ನು ಸಿಗದೆಇರುವ ಫಲಾನುಭವಿಗಳನ್ನು ನಿರ್ಗತಿಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಧರ್ಮಸ್ಥಳ ಶ್ರಿ ಮಂಜುನಾಥ ಸಂಸ್ಥೆ ಮಾಡುತಿದೆ ಎಂದು ಹೇಳಿದರು. ಶ್ರಿಮತಿ ಪ್ರಭಾವತಿ ರಾಜನವರ ಅಂಗನವಾಡಿ ಟಿಚರ. ಶ್ರಿ ಜಗದೀಶ ಸರ್ ಪಿಒ. ಶ್ರಿಮತಿ ನಸಿಮಾ ಮೆಡಂ ಎಪ್ ಎಕ್ಸ.
ಈ ಸಭೆಯಲ್ಲಿ ಉಪಸ್ಥಿತರಾದ ಶ್ರಿಮತಿ ಕವಿತಾ ರಾಜರತ್ನ ಪಾಟೀಲ ಅಂಗನವಾಡಿ ಟೀಚರ, ಶ್ರಿಮತಿ ಬನಶಂಕರಿ ಶಂಕರಗೌಡ ಪಾಟೀಲ ಅಂಗನವಾಡಿ ಟೀಚರ, ಶ್ರಿಮತಿ ಸಂಗಿತಾ ಸಂತೋಷ ಮಾಹಾಜನಶಟ್ಟಿ ಆಶಾಕಾರ್ಯಕರ್ತಿ, ಕುಮಾರಿ ದೀಪಾ ಸಾವಳೆ. ಸುಮಾರು 30ರಿಂದ40 ಮಹಿಳೆಯರು ಹಾಗೂ ಮಕ್ಕಳು ಹಾಜರಿದ್ದರು.