ಇಂಡಿ:ಮೇ.28: ಮಾಜಿ ಉಪ ಮುಖ್ಯ
ಮಂತ್ರಿ ಹಾಲಿ ಶಾಸಕ ಲಷ್ಮಣ್ಣ ಸವದಿ ಅವರಿಗೆ ಸಚಿವ ಸ್ಥಾನ ಕೈ ತಪಿದಕ್ಕೆ ಬೇಸರ ಗೊಂಡು ಅವರ ಅಭಿಮಾನಿಗಳು ಟೈಯರಿಗೆ ಬೆಂಕಿ ಹಚ್ಚುವ ಮುಖಾಂತರ ಆಕ್ರೋಶ ಹೊರಹಕಿದ ಘಟನೆ ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದಿದೆ. ಸುಮಾರು 75ಸಾವಿರ ಮತಗಳ ಅಂತರದಿಂದ ಗೆಲುವು ಸಾದಿಸಿ ಅಷ್ಟೇ ಅಲ್ಲದೆ ಕಾಗವಾಡ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರ ದಲ್ಲಿ ಮೊದಲು ಹೇಳಿದಹಾಗೆ ಗೆಲ್ಲಿಸಿ ತೋರಿಸಿದ್ದಾರೆ. ಅಂತಹ ಹಿರಿಯ ನಾಯಕರನ್ನು ಕಡೆಗೇನಿಸಿರುವುದು ಹಾಗೂ ಗಾಣಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದೆ ಇರುವುದು ಸರಿ ಅಲ್ಲ ಎಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುರೇಶ ಬಿರಾದಾರ ಆಕ್ರೋಶ ಹೊರಹಾಕಿದರು. ಸಂದರ್ಭದಲ್ಲಿ. ಅರವಿಂದ ಅಂದೇವಾಡಿ, ಸೋಮನಿಂಗ ಅಂದೇವಾಡಿ, ಶ್ರೀಶೈಲ ಹತ್ತರಕಿ, ಬಸವರಾಜ ಅಂದೇವಾಡಿ, ಸಿದ್ದಪ್ಪ ಮೇತ್ರಿ, ಮಹಾಬಳು ಹೊಸಮನಿ, ಪುಂಡಲೀಕ ಕೌಲಗಿ, ಅಪ್ಪಾಶಾ ಯಮೆಲಿ, ಹುಶೇನಿ ಕಾಣಿ, ಮುದಕು ಹೊಸಮನಿ, ಅನಿಲ ಅಂದೇವಾಡಿ, ಗಣು ಹಾವಳಗಿ, ಚಾಂದ ಅತ್ತಾರ, ರೈಹಿಮಾನ ಇಂಡಿ, ಸೈಪನ ಕಟಗಿ, ಅರ್ಜುನ ಮೊರೆ, ಗಣಪತಿ ಹಾವಳಗಿ ರಮೇಶ ಪರಗೊಂಡ, ಕಲ್ಲಪ್ಪ ಸಾಲೋಟಗಿ, ಧರೆಪ್ಪ ಬೆನೂರ, ರೇವು ಹಾವಳಗಿ, ಮುಬಾರಕ ಅತ್ತಾರ, ಚಾಂದ ಕಟಗಿ, ಮಹಿಬೂಬ ಮಣುರ, ಮುತ್ತಣ್ಣ ಹಿರೇಮಠ,ಶ್ರೀಶೈಲ ಮಠ. ಇನ್ನು ಅನೇಕರು ಭಾಗವಹಿಸಿದ್ದರು.