ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ ಕೇಂದ್ರಗಳ ವ್ಯವಸ್ಥೆ

ವಿಜಯಪುರ:ಎ.25: ಜಿಲ್ಲೆಯಲ್ಲಿ ಏಕಮಾದರಿಯಾಗಿ ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು ಮತದಾನ ಮಾಡಲು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಜಿಲ್ಲೆಯ ಆಯಾ ವಿಧಾನಸಭಾವಾರು ಅಂಚೆ ಮತದಾನ ಕೇಂದ್ರವನ್ನು ದಿನಾಂಕ : 02-05-2023 ರಿಂದ 04-05-2023 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ತೆರೆಯಲು ಕ್ರಮ ವಹಿಸಿ, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾದಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದ್ದಾರೆ.

ಜಿಲ್ಲೆಯ 26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ತಹಶೀಲ್ದಾರ ಕಾರ್ಯಾಲಯದ ಆರ್.ಆರ್.ಶೀರಸ್ತೆದಾರರ ಕೊಠಡಿ ಸಂ.04 ರಲ್ಲಿ, 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ದೇವರಹಿಪ್ಪರಗಿ ತಹಶೀಲ್ದಾರ ಕಾರ್ಯಾಲಯದ ಭೂಮಿ ಕೇಂದ್ರದ ಕೊಠಡಿಯಲ್ಲಿ, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ತಹಶೀಲ್ದಾರ ಕಾರ್ಯಾಲಯದ ಗ್ರೇಡ್-2 ತಹಶೀಲ್ದಾರರ ಕೊಠಡಿಯಲ್ಲಿ, 29-ಬಬಲೇಶ್ವರ ಮತಕ್ಷೇತ್ರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ, 30-ವಿಜಯಪುರ ನಗರ ಮತಕ್ಷೇತ್ರದಲ್ಲಿ ಕನಕದಾಸ ಬಡಾವಣೆಯ ತಹಶೀಲ್ದಾರ ಕಚೇರಿಯ ಕೋಣೆ ಸಂಖ್ಯೆ 12ರಲ್ಲಿ, 31-ನಾಗಠಾಣ ಮತಕ್ಷೇತ್ರದಲ್ಲಿ ವಿಜಯಪುರ ನಗರದ ಕುಶಲಕರ್ಮಿ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಆವರಣ, ಸ್ಟೇಶನ್ ಬ್ಯಾಕ್ ರೋಡ್ ಶಿಕಾರಖಾನೆಯಲ್ಲಿ, 32-ಇಂಡಿ ಮತಕ್ಷೇತ್ರದಲ್ಲಿ ತಹಶೀಲ್ದಾರ ಕಚೇರಿಯ ನ್ಯಾಯಾಲಯ ಸಭಾಂಗಣದ ಕೊಠಡಿಯಲ್ಲಿ ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ ತಹಶೀಲ್ದಾರ ಕಾರ್ಯಾಲಯದ ಚುನಾವಣಾ ಶಾಖೆಯ ಪಕ್ಕದ ಸಾಮಾಜಿಕ ಭದ್ರತಾ ಯೋಜನೆಯ ಕೊಠಡಿಯಲ್ಲಿ ಅಂಚೆ ಮತದಾನ ಕೇಂದ್ರಗಳ ಕಾರ್ಯನಿರ್ವಹಣೆಗೆ ಅವರು ಸೂಚಿಸಿದ್ದಾರೆ.