ಅಗತ್ಯ ಸೇವೆಗಳಿಗಾಗಿ ಪರ್ಯಾಯ ವ್ಯವಸ್ಥೆ

ಗದಗ ಮೇ.28: ಕರೋನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ, ಹಾಗೂ ಸೋಂಕಿನಿಂದ ಜೀವಹಾನಿ ತಪ್ಪಿಸುವ ಉದ್ದೇಶದಿಂದ ಗದಗ ಜಿಲ್ಲೆಯಾದ್ಯಂತ ಜೂನ್ 1 ರ ಬೆಳಿಗ್ಗೆ 6 ಗಂಟೆಯ ವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ವಸ್ತುಗಳ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರ ಸದುಪಯೂಗ ಪಡೆದು ಅನಗತ್ಯ ಸಾರ್ವಜನಿಕರು ಮನೆಯಿಂದ ಹೊರಬರದೇ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕರಿಗೆ ದಿನನಿತ್ಯ ತರಕಾರಿಗಳನ್ನು ವಾರ್ಡವಾರು ಪೂರೈಸಲು ತಳ್ಳುಗಾಡಿ, ಆಟೋ, ಟಂಟಂ ವಾಹನಗಳ ಮೂಲಕ ಮನೆಯ ಬಾಗಿಲಿಗೆ ತರಕಾರಿ ವ್ಯಾಪಾರಿಗಳು ಆಗಮಿಸುವರು. ಈ ಸಂಸರ್ಭದಲ್ಲಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಅಲ್ಲದೇ ವ್ಯಾಪಾರಿಗಳು ತರಕಾರಿ ಹಣ್ಣು ಹೂಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದೇ ಕನಿಷ್ಠ ಬೆಲೆಯಲ್ಲಿ ನೀಡಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಗಾವಹಿಸಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಅಂದಾಜು 250 ತಳ್ಳುವ ಗಾಡಿಗಳಿದ್ದು, ನಗರ ಪಟ್ಟಣಗಳಲ್ಲಿ ಪ್ರತಿ ಒಂದು ವಾರ್ಡಿಗೆ ಪ್ರತಿದಿನ ಅಂದಾಜು 2885 ಕೆ.ಜಿಯಷ್ಟು ವಿವಿಧ ಮಾದರಿಯ ತರಕಾರಿಗಳನ್ನು ಹಾಗೂ 1025 ಕೆ.ಜಿಯಷ್ಟು ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ವಾರ್ಡವಾರು ತಳ್ಳುವಾಡಿಗಳನ್ನು ನಿಯೋಜಿಸಲಾಗಿದೆ. ಈ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಮೇಲುಸ್ತುವಾರಿ ನೋಡಲು ಸೂಚಿಸಿದೆ.
ದಿನಸಿ, ರೇಷನ್ ಅಂಗಡಿಗಳ ಮಾಲೀಕರು ಸಾರ್ವಜನಿಕರಿಂದ ಇಂಡೆಂಟ್ ಪಡೆದು ಮನೆಗಳಿಗೆ ದಿನಸಿ, ಆಹಾರ ಪದಾರ್ತಳನ್ನು ಪೂರೈಸಲು ಸೂಚಿಸಲಾಗಿದೆ. ಹಾಗೂ ಹೋಮ ಐಸೋಲೇಷನಲ್ಲಿರುವವರಿಗೆ ತರಕಾರಿ, ದಿನಸಿಗಳನ್ನು ಆಯಾ ಸ್ಥಳೀಯ ಅಧಿಕಾರಿಗಳು ಪೂರೈಕೆಗೆ ಕ್ರಮ ವಹಿಸಲು ಸೂಚಿಸಲಾಗಿದೆ.
ರೈತರಿಗೆ ಕೃಷಿ ಯಂತ್ರೋಪಕರಣ, ಬಿತ್ತನೆ ಬೀಜ ಗೊಬ್ಬರ ಖರೀದಿಗಾಗಿ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ವಿನಾಯಿತಿ ನೀಡಲಾಗಿದೆ. ಈ ಅವಧಿಯಲ್ಲಿ ರೈತರು ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಕಾಯ್ದುಕೊಂಡು ವ್ಯವಹರಿಸಬೇಕು. ಸಾರ್ವಜನಿಕರಿಗೆ ಅನಾರೋಗ್ಯ ಎದುರಾದ ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ವಾಹನಗಳ ಅಗತ್ಯವಿದ್ದಲ್ಲಿ, ಸ್ಥಳೀಯವಾಗಿ ಇರುವ ಅಧಿಕಾರಿಗಳು ವಾಹನ ವ್ಯವಸ್ಥೆಗೆ ಮಾಡಲು ಸಹಕರಿಸುವಂತೆ ತಿಳಿಸಲಾಗಿದೆ.
ಜಿಲ್ಲಾ ಸಹಾಯವಾಣಿ ಸಂಖ್ಯೆ 08372- 238182 ಇದ್ದು, ಸಾರ್ವಜನಿಕರು ಯಾವುದೇ ರೀತಿಯ ತೋಂದರೆಯಾದಲ್ಲಿ ಸಹಾಯವಾಣಿ ಸಂಪರ್ಕಿಸಬೇಕು. ಇದಲ್ಲದೇ ಸಹಾಯವಾಣಿಯಿಂದ ಕೋರೊನಾ ಸೋಂಕಿನ ಸಾಮಾನ್ಯ ಮಾಹಿತಿ ಹಾಗೂ ಲಸಿಕಾಕರಣ ಮಾಹಿತಿ ಪಡೆಯಬಹುದಾಗಿದೆ.
ಜೂನ್ 1 ರವರೆಗೆ ಬ್ಯಾಂಕ್‍ಗಳಲ್ಲಿ ಸಾರ್ವಜನಿಕರ ವ್ಯವಹಾರ ನಿರ್¨ಂದಿಸಿದೆ. ಈ ಅವದಿಯಲ್ಲಿ ಜಿಲ್ಲೆಯಲ್ಲಿರುವ 250 ಕ್ಕೂ ಅಧಿಕ ಬ್ಯಾಂಕ್ ಕರೆಸ್ಪಾಂಡೆಂಟ್‍ಗಳು ಸ್ಥಳೀಯವಾಗಿ ಗ್ರಾಮಗಳಲ್ಲಿ ಲಬ್ಯವಿದ್ದು, ಸಾರ್ವಜನಿಕರಿಗೆ ನಗದು ಡ್ರಾ ಮಾಡಿಕೊಡುವಂತೆ ತಿಳಿಸಲಾಗಿದೆ. ಇದರೊಂದಿಗೆ ಅಂಚೆ ಕಚೇರಿಯ ನಗದು ವ್ಯವಹಾರಗಳನ್ನು ಸಹ ಪೆÇೀಸ್ಟಮ್ಯಾನ್‍ಗಳ ಮೂಲಕ ಸ್ಥಳೀಯವಾಗಿಯೇ ಮಾಡುವಂತೆ ತಿಳಿಸಿದೆ.
ಒಟ್ಟಾರೆ ಜಿಲ್ಲಾಧ್ಯಂತ ಜೂನ್ 1 ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಸೋಂಕಿನ ಸರಪಳಿ ತುಂಡರಿಸಿ, ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಹೇರಲಾಗಿದ್ದು, ಸಾರ್ವಜನಿಕರು ವಿನಾಕಾರಣ ಹೊರಗಡೆ ಬರಬಾರದು, ಅಗತ್ಯವಿದ್ದಲ್ಲಿ ಮಾತ್ರವೇ ಹೊರಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಜನರು ಗುಂಪು ಸೇರುವುದನ್ನು ಬಿಟ್ಟು, ಸಾಧ್ಯವಾದಷ್ಟು ಶುಚಿತ್ವ ಕಾಯ್ದುಕೊಳ್ಳಬೇಕು. ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.