
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.19: ಆಹಾರ ಪದಾರ್ಥಗಳ ಮೇಲೆ ಸುಂಕ ವಿಧಿಸಿರುವುದನ್ನು ಭಾರತ ಕಮ್ಯೂನಿಷ್ಟ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಸೇರಿದಂತೆ ಸದ್ಯದ ಮಳೆ ಹಿನ್ನೆಲೆಯಲ್ಲಿ ರೈತರು, ಜನ ಸಾಮಾನ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಸಹಕಾರ ನೀಡುವ ಬದಲು ಮೊದಲ ಬಾರಿ ತೆರಿಗೆ ಹಾಕಿರುವುದು ಖಂಡನೀಯ ಎಂದರು.
ಲಾಭ ಗಳಿಸುವ ಸಂಸ್ಥೆಗಳನ್ನು ಬಿಟ್ಟು ಸಾಮಾನ್ಯರ ಮೇಲೆ ಭಾರ ಬೀಳುವ ಇಂತಹ ನೀತಿಯನ್ನು ವಿರೋಧಿಸುತ್ತೇವೆ ಎಂದರು. ಪ್ರಗತಿಪರರು, ಸಮಾಜ ಚಿಂತಕರುಗಳಿಗೆ ಬಹಿರಂಗ ಬೆದರಿಕೆಯ ಪತ್ರ ಬಂದಿರುವುದು ಅದನ್ನು ಬೆಂಬಲಿಸುವಂತೆ ರಾಜ್ಯ ಸರ್ಕಾರ ಮೌನವಹಿಸಿದ್ದು ಸಹ ಖಂಡನೀಯ ತಕ್ಷಣವೇ ಬೆದರಿಕೆ ಕೋರರನ್ನು ತಡೆಯಬೇಕು
ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ತಕ್ಷಣವೇ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ನಿರ್ಮಾಣವಾಗಬೇಕಾಗಿರುವ ಧ್ವಜಸ್ತಂಭ ಟೆಂಡರ್ ಇಲ್ಲದೆ ಮಾಡುವುದು ಅಕ್ಷಮ್ಯ ಇಂತಹ ತಪ್ಪುಗಳಾಗಬಾರದು, ಧ್ವಜಸ್ತಂಭ ಕಾಮಗಾರಿ ಯಾರು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಮಾಹಿತಿ ಇಲ್ಲ ಎನ್ನುವುದಾದರೆ ಹೇಗೆ ಯಾರು ಆಡಳಿತ ನಡೆಸುತ್ತಿದ್ದಾರೆ, ಸಾರ್ವಜನಿಕ ಹಣವನ್ನು ನಿಯಮ ಬದ್ದವಾಗಿ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಎಸ್.ಬಸವರಾಜ್, ಭಾಸ್ಕರ್ ರೆಡ್ಡಿ, ಎಂ.ಜಂಬಯ್ಯನಾಯಕ, ಟಿ.ಮಾಳಮ್ಮ ತಾಲೂಕು ಕಾರ್ಯದರ್ಶಿ ಸ್ವಾಮಿ ಹಾಜರಿದ್ದರು.