ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎಸ್. ಡಿ. ಪಿಐ ಪ್ರತಿಭಟನೆ

ರಾಯಚೂರು, ಜುಲೈ,೨೧,ಅಗತ್ಯ ವಸ್ತುಗಳಾದ ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬದುಕಿನ ಮೇಲೆ ಪ್ರಹಾರ ನಡಿಸಿದೆ ಎಂದು ಕೇಂದ್ರ ಸರಕಾರ ವಿರುದ್ಧ ಎಸ್ ಡಿ ಪಿ ಐ ನಗರದ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಪತಿಭಟನೆ ನಡೆಸಿದರು.
ಕೇಂದ್ರದ ತೆರಿಗೆ ನೀತಿ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕಿದೆ. ಈಗಾಗಲೇ ಪೆಟ್ರೋಲ್, ಡೀಸಲ್, ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಮಧ್ಯಮ ವರ್ಗ ಮತ್ತು ಬಡವರ ಬದುಕು ಜಿ ಎಸ್ ಟಿ ಹೆಚ್ಚಳದಿಂದ ಮತ್ತಷ್ಟು ದುರ್ಬರವಾಗಲಿದೆ. ಕಳೆದ ಬಾರಿ ಜಿ.ಎಸ್.ಟಿ ಯನ್ನು ಜಾರಿಗೆ ತರುವ ವೇಳೆ ಪ್ರಧಾನಿ ಮೋದಿಯವರು ಈ ಹಿಂದಿನ ಸರಕಾರಗಳು ಅಕ್ಕಿ ಮತ್ತು ಹಾಲಿಗೂ ತೆರಿಗೆ ಪಡೆಯುತ್ತಿತ್ತು. ನನ್ನ ಸರಕಾರ ಯಾವುದೇ ಕಾರಣಕ್ಕೂ ಅಕ್ಕಿ ಮತ್ತು ಹಾಲಿಗೆ ಜಿ ಎಸ್ ಟಿ ಪಡೆಯುದಿಲ್ಲ ಎಂದಿದ್ದರು.ಇದೀಗ ಪ್ರಧಾನಿ ಮೋದಿಯವರು ಎಂದಿನಂತೆ ಮಾತು ತಪ್ಪಿದು, ಸರಕಾರ ಹಗಲು ದರೋಡೆಗಿಳಿದಿದೆ, ಕೂರ ಸರ್ಕಾರದಿಂದ ಮಾತ್ರ ಇಂತಹ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಆರೋಪಿಸಿದರು.
ಕಾರ್ಪೊರೇಟ್ ಕಂಪನಿಗಳು ಮತ್ತು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ ಅವರಿಗೆ ಕೆಂಪುಹಾಸು ಹಾಕುವ ಸರ್ಕಾರಕ್ಕೆ ಬಡವರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ಸಾಬೀತಾಗಿದೆ. ಅಚ್ಛೇ ದಿನ್ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ರಕ್ತವನ್ನು ಹೀರಿ ಅವರ ಬದುಕನ್ನು ಕಸಿಯುತ್ತಿದೆ. ಜನಸಾಮಾನ್ಯರು ಕೇಂದ್ರದ ಈ ಜನವಿರೋಧಿ ಮತ್ತು ದುಷ್ಕ ನೀತಿಯನ್ನು ಅರಿತು ಈಗಲೇ ಈ ಬಗ್ಗೆ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಭಾರತ ಮತ್ತೊಂದು ಶ್ರೀಲಂಕಾ ಆಗುವುದರಲ್ಲಿ ಸಂಶಯವಿಲ್ಲ .ಹಾಗಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೋದಿ ಸರಕಾರ ಕೂಡಲೇ ದಿನಬಳಕ ಆಹಾರ ವಸ್ತುಗಳ ಮೇಲೆ ಹಾಕಿರುವ ಉSಖಿ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ. ಸರಕಾರ ಇನ್ನೂ ಜಿ ಎಸ್ ಟಿ ಯನ್ನು ಬಡವರ ಮೇಲೆ ಪ್ರಯೋಗ ಮಾಡುತ್ತಲೇ ಮುಂದುವರಿದರೆ, ಮೋದಿ ಸರಕಾರದ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನವನ್ನು ನಡೆಸಬೇಕಾಗುತ್ತದೆ ಎಂಬ ಸಂದೇಶವನ್ನು ಕೇಂದ್ರ ಒಕ್ಕೂಟ ಸರಕಾರಕ್ಕೆ ಎಸ್ ಡಿ ಪಿ ಐ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ವಿವಿಧ ಕಾರ್ಯಕರ್ತರು ಇದ್ದರು.