ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ರೈತ ಸಂಘ ಒತ್ತಾಯ

ರಾಯಚೂರು.ಏ.೨೬-ಸರ್ಕಾರ ೨೦೨೨ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳ್ಳಿಸುವುದಾಗಿ ಹೇಳುತ್ತಿದ್ದು ಕೃಷಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. ಗೊಬ್ಬರದ ಬೆಲೆ ಏರಿಕೆಯಿಂದಾಗಿ ಕೃಷಿಕರು ವ್ಯವಸಾಯವನ್ನೆ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಕೂಡಲೇ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿಶ್ವವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರವು ಬೇರೆ ದೇಶಗಳು ಕೃಷಿ ಮತ್ತು ಕೃಷಿ ಉಪಕಸುಬುಗಳಿಗೆ ಸಬ್ಸಿಡಿಯನ್ನು ಹೆಚ್ಚಾಗಿ ನೀಡುತ್ತಿವೆ. ಕೃಷಿಕರಿಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸುತ್ತಿವೆ ಆದರೆ ನಮ್ಮ ದೇಶದ ಕೃಷಿ ಕ್ಷೇತ್ರ ಮತ್ತು ಕೃಷಿಕರಿಗೆ ಭಾರತ ಸರ್ಕಾರ ಅಸ್ವಾಸನೆ ನೀಡುತ್ತಾ ಉತ್ತೇಜನೆಗಳು ಪ್ರತಿ ವರ್ಷ ಕಡಿಮೆ ಮಾಡುತ್ತಾ ಬಂದಿವೆ ಎಂದು ದೂರಿದರು.
ಗೊಬ್ಬರದ ಸಬ್ಸಿಡಿಯನ್ನು ಕಡಿಮೆ ಮಾಡಿದರಿಂದ ಉತ್ಪಾದಕ ಕಂಪನಿಗಳು ಹೆಚ್ಚಾಗಿ ಬೆಲೆಯನ್ನು ನಿಗದಿ ಮಾಡುತ್ತಿದೆ. ಇದರಿಂದ ಕೃಷಿಕರಿಗೆ ಹೊರಲಾರದಷ್ಟು ಹೊರೆಯಾಗಿದೆ. ಹೆಚ್ಚಳ ಮಾಡಿದ ಗೊಬ್ಬರದ ಬೆಲೆಯನ್ನು ಈ ಕೂಡಲೇ ಇಳಿಸಬೇಕು ಕೃಷಿ ಮತ್ತು ಕೃಷಿಕರಿಗೆ ಉತ್ತೇಜನ ಕೊಡುವಂತಹ ಯೋಜನೆಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
೩ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆಯಬೇಕು. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸುವುದನ್ನು ಕೈಬಿಡಬೇಕು. ಡಿಸೇಲ್, ಪೆಟ್ರೋಲ್, ಗ್ಯಾಸ್ ಸಿಲೇಂಡರ್ ಬೆಲೆ ಹೆಚ್ಚಳದಿಂದ ರೈತ ಸಮುದಾಯವು ಸೇರಿದಂತೆ ಇತರೆ ಎಲ್ಲಾರಿಗೂ ಹೊರೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಇತರೆ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾಧ್ಯಕ್ಷ ಸೂಗರಯ್ಯ ಆರ್‌ಎಸ್ ಮಠ, ಮಲ್ಲಣ ದಿನ್ನಿ, ಗೋವಿಂದಪ್ಪ ನಾಯಕ, ಬೂದೆಯ್ಯ ಸ್ವಾಮಿ, ದೇವರಾಜ ನಾಯಕ, ವೀರೇಶ ಸ್ವಾಮಿ, ಗದ್ದೆಗೌಡ ತಡಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.