ಅಗತ್ಯ ವಸ್ತುಗಳ ಬೆಲೆಏರಿಕೆ ನಿಯಂತ್ರಣಕ್ಕೆ ಮನವಿ

ದಾವಣಗೆರೆ. ಮೇ.೨೬; ಕೋವಿಡ್ -19 ಆರೈಕೆ ಕೇಂದ್ರಗಳನ್ನು ಹಳ್ಳಿಗಳಲ್ಲಿ ಹೆಚ್ಚಿಸಬೇಕು ಹಾಗೂ ಪೆಟ್ರೋಲ್ , ಡಿಸೇಲ್ ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಲು ಕ್ರಮ ವಹಿಸಬೇಕೆಂದು ಕರ್ನಾಟಕ ಸೋಷಿಯಲ್ ಸರ್ವೀಸ್ ಸಂಘಟನೆಯ ಅಧ್ಯಕ್ಷ ಮಹಮದ್ ಹಯಾತ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕೊರೊನಾ 2 ನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ . ಇಂತಹ ಕಠಿಣ ಸಮಯದಲ್ಲೂ ಸರ್ಕಾರಗಳು ಜನಸಾಮಾನ್ಯರ ನೆರವಿಗೆ ಧಾವಿಸಿದೆ ದಿನನಿತ್ಯ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿಕೊಂಡು ಹೋಗುತ್ತಿರುವುದು . ಜೀವನ ನಡೆಸಲು ಕಷ್ಟವಾಗುತ್ತಿದ್ದೆ . ಕೊರೊನಾ 2 ನೇ ಅಲೆಯ ಲಾಕ್ ಡೌನ್ ನಂತರ ಸುಮಾರು 12 ಬಾರಿ ಪೆಟ್ರೋಲ್ , ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವುದು ಜನ ಸಾಮಾನ್ಯರ ಮೇಲೆ ಬರೆ ಎಳೆದಿದೆ. ಹಳ್ಳಿಗಳಲ್ಲಿ ಭತ್ತದ ಬೆಳೆ ಕೈಗೆ ಬಂದಿದ್ದು ಕಳೆದ ಬಾರಿ ಉತ್ತಮ ಭತ್ತ ಕ್ವಿಂಟಾಲ್‌ಗೆ ರೂ . 2200 – ಇತ್ತು . ಈಗ ಇಳಿದು ರೂ . 1500 – ಕ್ವಿಂಟಾಲ್ ಗೆ  ಇಳಿದಿದೆ . ರೈತರಿಗೆ ಭತ್ತದ ಬೆಳೆಗೆ ಬೆಂಬಲ ಬೆಲೆಯು ಇಲ್ಲ , ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಪ್ಯಾಕೆಟ್‌ಗಳನ್ನು ಘೋಷಣೆ ಮಾಡದೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಿ ಜನ ಸಾಮಾನ್ಯರಿಗೆ ನೆರವಾಗಬೇಕು. ಹಳ್ಳಿಗಳಲ್ಲಿ ಕೋವಿಡ್ ಕೇಂದ್ರಗಳನ್ನು ಹೆಚ್ಚಿಸಿ ಆಕ್ಸಿಜೆನ್ , ವೆಂಟಿಲೇಟರ್ , ಬೆಡ್ , ಇನ್ನೇತರ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕು . ಸರ್ಕಾರ ಮತ್ತು ಜಿಲ್ಲಾಡಳಿತಗಳಿಂದ ದಿನಕೊಂದು ಕೊವಿಡ್ ಮಾರ್ಗ ಸೂಚಿಗಳನ್ನು ಬದಲಾಯಿಸುತ್ತಿರುವುದರಿಂದ ಜನಸಾಮಾನ್ಯರು ಗೊಂದಲದಿಂದ ಇದ್ದಾರೆ .   ಜಿಲ್ಲಾಡಳಿತವು ವ್ಯಾಪಾರ ಮತ್ತು ವಹಿವಾಟು ನಡೆಸಿ ಜೀವನ ನಡೆಸಲು ಈ ಹಿಂದೆ ನಿಗದಿಪಡಿಸದಂತೆ ಬೆಳಗ್ಗೆ 6.00 ರಿಂದ 10,00 ಗಂಟೆವರೆಗೆ ಅವಕಾಶ ಮಾಡಿಕೊಡಬೇಕೆಂದರು. ಸುದ್ದಿಗೋಷ್ಠಿಯಲ್ಲಿ  ಆದಿಲ್ ಖಾನ್ , ಎಸ್.ಕೆ , ಅಣ್ಣಪ್ಪ ಇದ್ದರು.