ಅಗತ್ಯ ವಸ್ತುಗಳ ದರ ನಿಗದಿ

ವಿಜಯಪುರ, ಮೇ.3-ಕೋವಿಡ್ 19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮೇ 12 ರವರೆಗೆ ಸರ್ಕಾ ರವು ಜನತಾ ಕಫ್ರ್ಯೂ ಪೆÇೀಷಿಸಿದ್ದು, ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಲಾಗಿರುತ್ತದೆ. ಸದರಿ ಜನತಾ ಕಫ್ರ್ಯೂ ನೆಲೆಯಲ್ಲಿ ಕೆಲವೊಂದು ಕಿರಾಣಿ ವರ್ತಕರು ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ದರವನ್ನು ಪಡೆದಿದ್ದಾರೆಂದು ದೂರುಗಳು ಬರುತ್ತಿವೆಯಾದ್ದರಿಂದ ಅಗತ್ಯ ವಸ್ತುಗಳ ಚಿಲ್ಲರೆ ದರ ಪ್ರತಿ ಕೆಜಿಗೆ ಈ ಕೆಳಕಂಡಂತೆ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ .
ಸಕ್ಕರೆ ಪ್ರತಿ ಕೆಜಿಗೆ 35 ರೂ. ಮೈದಾ 28ರೂ, ಬಾಂಬೆ ರವಾ 30ರೂ, ಕೇಸರಿ ರವಾ 40ರೂ. ತೊಗರಿಬೇಳೆ (ಮೀಡಿಯಂ) 95 ರೂ, ತೊಗರಿಬೇಳೆ (ಪಟಾಕ 103ರೂ, ಕಡ್ಲೆಬೇಳೆ- 70ರೂ, ಗೋಧಿ ಹಿಟ್ಟು-28ರೂ, ಇಡ್ಲಿ ರವ-35ರೂ, ಉದ್ದಿನಬೇಳೆ 110 ರೂ. ಅವಲಕ್ಕಿ (ಮೀಡಿಯಂ)-35ರೂ, ಅವಲಕ್ಕಿ (ಉತ್ತಮ) 40ರೂ, ಹೆಸರು ಬೇಳೆ 100ರೂ. ಬೆಲ್ಲ-40ರೂ, ಶೇಂಗಾ (ಹಸಿ)95 ರೂ, ಶೇಂಗಾ ( ಹುರಿದಿದ್ದು) 120ರೂ. ಪುಟಾಣಿ-85 ರೂ. ನಿಗದಿಪಡಿಸಿದೆ.
ಅದರಂತೆ ಕೊಬ್ಬರಿ -200ರೂ. ಬೆಳ್ಳುಳ್ಳಿ-60 ರೂ, ಬಿಳಿಜೋಳ-38ರೂ, ಗೋಧಿ-35 ರೂ, ಅಲಸಂದಿ-80 ರೂ. ಹುಣಸೆಹಣ್ಣು -90ರೂ, ಪಾಮ್ ಆಯಿಲ್ -135ರೂ, ಸೂರ್ಯಪಾನ ಆಯಿಲ್ -175ರೂ, ಅಕ್ಕಿ ಸೋನಾ-40 ರೂ, ಅಕ್ಕಿ ಜೀರಾ-50ರೂ, ಅಕ್ಕಿ ಕೋಲಂ-58 ರೂ. ಇನ್ನಿತರ ವಸ್ತುಗಳ ಪ್ಯಾಕ್ ಮಾಡಿ ಎಂ. ಆರ್.ಪಿ ದರದಲ್ಲಿ ಲಭ್ಯವಿರುತ್ತದೆ.
ಮೇಲೆ ತಿಳಿಸಿದ ದರಕ್ಕಿಂತ ಯಾರಾದರೂ ಚಿಲ್ಲರೆ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಗ್ರಾಹಕರು ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 9380443752 ಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.