ಅಗತ್ಯ ಬೀಜ ರಸಗೊಬ್ಬರ ಒದಗಿಸುವಂತೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.11: ಈ ವರ್ಷ ಮಳೆ ಚೆನ್ನಾಗಿ ಬಂದಿರುವುದರಿಂದ ತೊಗರಿ,  ಜೋಳದ  ಬೇಡಿಕೆ ಇದೆ  ರೈತರಿಗೆ ಅಗತ್ಯವಾದಷ್ಟು ದಾಸ್ತಾನು ಒದಗಿಸಬೇಕು ಎಂದು  ರೈತ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಬೀಜದಂತೆ ರಸಗೊಬ್ಬರವನ್ನು ಸಹ ಇದಗಿಸಬೇಕು.  ಮೆಣಸಿನಕಾಯಿ ಬೀಜ ಕಳಪೆ ಆಗದಂತೆ  ತೋಟಗರಿಕೆ ಇಲಾಖೆ ಅಧಿಕಾರಿಗಳು ಬೀಜದ ಅಂಗಡಿಗಳಿಗೆ  ಭೇಟಿ ನೀಡಬೇಕು ಎಂದು ಕೋರಿದ್ದಾರೆ.
2023 ರ ಬರಗಾಲದ ಬೆಳೆ ಪರಿಹಾರ ಇಲ್ಲಿಯವರೆಗೆ ರೈತರಿಗೆ ಜಮೆ ಆಗಿರುವುದಿಲ್ಲ  ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಇಲ್ಲವಾದರೆ ರೈತರು ಹೋರಾಟ ಮಾಡಲು ಮುಂದಾಗುತ್ತಾರೆಂದಿರುವ ಅವರು.
ಸಧ್ಯ ತುಂಗಭದ್ರ ಜಲಾಶಯಕ್ಕೆ ಒಳ ಹರಿವು ಆರಂಭಗೊಂಡಿದೆ. ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಬಂದರೆ ಜುಲೈನಲ್ಲಿ ಕಾಲುವೆಗಳಿಗೆ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳವೇಕು. ಎಂದು ಸಂಘದ ಜಿಲ್ಲಾ ಅಧ್ಯಕ್ಷ ಸಂಗನಕಲ್ ಕೃಷ್ಣ, ಕೆ.ಮಾರಣ್ಣ, ಬೇವಿನಗಿಡದ ಯರಿಸ್ವಾಮಿ ಮೊದಲಾದವರು ಮನವಿ ಪತ್ರ ಸಲ್ಲಿಸಿದ್ದಾರೆ.