ಅಗತ್ಯ ತುರ್ತು ಕ್ರಮಕ್ಕೆ ಎಸ್‌ಎಫ್‌ಐ ಪ್ರತಿಭಟನೆ

ರಾಯಚೂರು.ಏ.೩೦- ಕೋವಿಡ್ ಸೋಂಕಿತರ ಸರ್ಕಾರ ಉಚಿತ ಆಹಾರವನ್ನು ಔಷಧಿಗಳನ್ನು ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಎಸ್‌ಎಫ್‌ಐ ಮುಖಂಡರು ಪ್ರತಿಭಟನೆ ನಡೆಸಿದರು.
ಕೋವಿಡ್ ಸೋಂಕಿತರಿಗೆ ರಾಜ್ಯ ಸರ್ಕಾರ ತ್ವರಿತ ಆಸ್ಪತ್ರೆ ಮತ್ತು ಆಂಬ್ಯೂಲೆಸ್ ಸೇವೆ ಒದಗಿಸಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಸೋಂಕಿತರಿಗೆ ಅಗತ್ಯ ತುರ್ತು ಕ್ರಮವಹಿಸಬೇಕು. ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆ ಬಲಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಮೇಶ ಹೀರಾಪೂರ, ನಾಗರಾಜ ನೀಲಗಲ್, ಅಮರೇಗೌಡ, ಚನ್ನಬಸವ, ಅಮರೇಶ, ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.