ಅಗತ್ಯ ಕ್ರಮದೊಂದಿಗೆ ಪರೀಕ್ಷೆ ನಡೆಸುವುದು ಉತ್ತಮ

ದಾವಣಗೆರೆ.ಮೇ.೨೯; ದೇಶದಲ್ಲಿ  ಕೊರೋನಾ ಸೋಂಕಿನ ಎರಡನೇ ಅಲೆ ಆರಂಭವಾಗಿರುವ ಕಾರಣ ಲಾಕ್ಡೌನ್ ಹೇರಲಾಗಿದೆ ಹಾಗಾಗಿ ಸಾರ್ವಜನಿಕರು ಆರ್ಥಿಕವಾಗಿ ಮತ್ತು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ಎಸ್ ಎಫ್ ಐ ಜಿಲ್ಲಾ ಸಂಚಾಲಕ ಇಫ್ತೆಕಾರ್ ಅಹ್ಮದ್ ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಈ ಸೋಂಕಿನ ಮಧ್ಯೆ  ಪರೀಕ್ಷೆ ನಡೆಸುವುದು ಒಂದು ತಲೆನೋವಿನ ಪ್ರಶ್ನೆಯಾಗಿದೆ. ಆದರೂ  ಪರೀಕ್ಷೆ ನಡೆಸುವುದು ಅನಿವಾರ್ಯ.ಪರೀಕ್ಷೆ ನಡೆಸಿದರೆ ಮುಂದೆ ಬರುವಂತಹ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ   ತೆರೆದ ಪುಸ್ತಕದ ಎಕ್ಸಾಮ್ ನಡೆಸಿದರೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ವಿದ್ಯಾಭ್ಯಾಸದ ಆಸಕ್ತಿ ಕಡಿಮೆಯಾಗುತ್ತದೆ, ತುಂಬಾ ಆಳವಾಗಿ ಮತ್ತು ಕಷ್ಟಪಟ್ಟು ಓದುವಂತಹ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗುತ್ತದೆ.             ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಹಾವಾಳಿ ಇಳಿಮುಖವಾದಾಗ ಒಂದು ತಿಂಗಳು ತಡವಾದರೂ ಕೂಡ ದ್ವಿತೀಯ ಪಿಯುಸಿ ಮತ್ತು  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ  ನಡೆಸುವುದು ಉತ್ತಮ ಎಂದಿದ್ದಾರೆ.