
ಮಂಡ್ಯ: ಮೇ.09:- ಅಗತ್ಯವಿರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ರೆಡ್ ಕ್ರಾಸ್ ಸಂಸ್ಥೆ ಧ್ಯೇಯವಾಗಿದೆ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ನಗರದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಕಚೇರಿಯಲ್ಲಿ ನಡೆದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಂಸ್ಥಾಪನಾ ದಿನಾಚರಣೆ ಮತ್ತು ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಮತ್ತು ಅಗತ್ಯ ಉಳ್ಳವರಿಗೆ ಜೀವ-ಜೀವನ ರಕ್ಷಿಸಿಕೊಳ್ಳಲು ನೆರವಾಗುವುದು,ಆರೋಗ್ಯರಕ್ಷಣೆ, ವಿಕಲಚೇನರ ಸಬಲೀಕರಣ,ನೇತ್ರ, ರಕ್ತದಾನಗಳಂತಹ ಸೇವಾಕಾರ್ಯ
ಗಳನ್ನು ಸಮಾಜಕ್ಕೆ ಒದಗಿಸುವ ಸದುದ್ದೇಶದಿಂದ ರೆಡ್ ಕ್ರಾಸ್ ಸೇವೆ ಸಲ್ಲಿಸುತ್ತಿದೆ ಎಂದು ನುಡಿದರು.
ಮೇ.08, ರೆಡ್‍ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವಾಗಿದೆ, ಈದಿನವನ್ನು ವಿಶ್ವಸಂಸ್ಥೆಯು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರರಿಸಲು ಘೋಷಿಸಿ,ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ರೆಡ್ ಕ್ರಾಸ್ ಶಾಖೆಗಳಲ್ಲೂ ಆಚರಿಸಿ, ಸೇವಾಕಾರ್ಯಗಳೊಂದಿಗೆ ಸ್ಮರಿಸಲಾಗುತ್ತದೆ ಎಂದು ತಿಳಿಸಿದರು.
1828ರ ಮೇ.8ರಂದು ಹೆನ್ರಿ ಡ್ಯೂನಾಂಟ್ ಅವರು ಜನಿಸಿದರು, ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಸ್ಥಾಪನೆಯಾಯಿತು, ಮಾನವೀಯತೆಯ ಕಾರ್ಯ ಮತ್ತು ಸೇವಾ ಕೆಲಸಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯ ಗೌರವಕ್ಕೆ ಪುರಸ್ಕೃತರಾದರು,ಜನಸೇವೆಗಾಗಿ 3ಬಾರಿ ವಿಶ್ವ ಮಟ್ಟದ ಶ್ರೇಷ್ಠ ನೋಬೆಲ್ ಪ್ರಶಸ್ತಿಯ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಗೆ ಲಭಿಸಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ನಿರ್ದೇಶಕ ಕೆ.ಟಿ.ಹನುಮಂತು,ಎಲ್ಲಿ ಪ್ರಕೃತಿಯಿಂದ ಆದ ಆಪತ್ತುಗಳು, ಮಾನವ ಸೃಷ್ಠಿತ ಅವಘಡಗಳಿಂದ ಜೀವ ರಕ್ಷಿಸಲು,ಗಾಯಾಳುಗಳನ್ನು ಬದುಕಿಸಲು ರೆಡ್ ಕ್ರಾಸ್ ಸೇವೆಗೆ ನಿಲ್ಲುತ್ತದೆ,ಸ್ವಯಂ ಸೇವಕರು, ಶಾಖೆಯ ಮೂಲಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ನುಡಿದರು.
ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ಕಿಟ್‍ಗಳನ್ನು ನೀಡಿ ಸೇವಾಕಾರ್ಯ
ಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ,ನಿರ್ದೇಶಕರಾದ ನಾರಾಯಣಸ್ವಾಮಿ,ಜವರೇಗೌಡ, ಷಡಕ್ಷರಿ,ಸಿದ್ದೇಗೌಡ,ಶಿವಲಿಂಗ ಮತ್ತಿತರರಿದ್ದರು.