ಬೀದರ:ಡಿ.26: ತೆಲಂಗಾಣದ ಸಂಗಾರೆಡ್ಡಿಯಿಂದ ಮಹಾರಾಷ್ಟ್ರ ಗಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65 ರಲ್ಲಿ ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಶೀಘ್ರ ಯುನಿಟೈರೆಕ್ಶನಲ್ ಫ್ಲೈಓವರ್, ಫ್ಲೈಓವರ್ ಹಾಗೂ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಹುಮನಾಬಾದ್ನ ಚಿದ್ರಿ ಬೈಸ್ಪಾಸ್ ಹತ್ತಿರ ಯುನಿ ಡೈರೆಕ್ಶನಲ್ ಫ್ಲೈಓವರ್, ಇದೇ ರಸ್ತೆಯಲ್ಲಿ ಫ್ಲೈಓವರ್, ರಾಮ ಆಯಂಡ್ ರಾಜ್ ಕಾಲೇಜು ಸಮೀಪ ಹಾಗೂ ಕಪ್ಪರಗಾಂವ ಬಳಿ ಫುಟ್ ಓವರ್ ಬ್ರಿಡ್ಜ್ ನಿರ್ಮಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ರಸ್ತೆ ದಾಟಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ದಿಸೆಯಲ್ಲಿ ಆದ್ಯತೆ ಮೇರೆಗೆ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹುಮನಾಬಾದ್ನ ಚಿದ್ರಿ ಬೈಸ್ಪಾಸ್ ಹತ್ತಿರ ಯುನಿ ಡೈರೆಕ್ಶನಲ್ ಫ್ಲೈಓವರ್, ಇದೇ ರಸ್ತೆಯಲ್ಲಿ ಫ್ಲೈಓವರ್, ರಾಮ ಆಯಂಡ್ ರಾಜ್ ಕಾಲೇಜು ಸಮೀಪ ಹಾಗೂ ಕಪ್ಪರಗಾಂವ ಬಳಿ ಫುಟ್ ಓವರ್ ಬ್ರಿಡ್ಜ್ ನಿರ್ಮಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ರಸ್ತೆ ದಾಟಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ದಿಸೆಯಲ್ಲಿ ಆದ್ಯತೆ ಮೇರೆಗೆ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.