ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

 ದಾವಣಗೆರೆ. ಜೂ.೧೦; ಸರ್ಕಾರಗಳು ಬೆಲೆ ಏರಿಕೆ ನೀತಿಗಳ ಬಗ್ಗೆ ಮೌನವಹಿಸಿದ್ದಾರೆ. ಜನಪರವಾಗಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತಾಡುತ್ತಿಲ್ಲ. ದೇಶದ ಕೆಲವೇ ಶ್ರೀಮಂತರ ಸಂಪನ್ಮೂಲಗಳು ಹೆಚ್ಚು ಮಾಡಲು ಕಾಳಜಿ ವಹಿಸುತ್ತಿದೆ ಎಂದು ಎ.ಐ.ವೈ.ಎಫ್ ರಾಜ್ಯ ಉಪಾಧ್ಯಕ್ಷರು ಆವರಗೆರೆ ವಾಸು ಆರೋಪಿಸಿದರು.ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಆನ್‌ಲೈನ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು  ಕೇಂದ್ರ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳಾದ ಅಡುಗೆಗೆ ದಿನನಿತ್ಯ ಅಗತ್ಯ ವಸ್ತುಗಳಾದ ಬೇಳೆ, ಎಣ್ಣೆ, ಕಾಳುಗಳು, ಅಡುಗೆ ಹಲವಾರು ವಸ್ತುಗಳು ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಗಗನಕ್ಕೆ ಏರಿದೆ. ಪೆಟ್ರೋಲ್ 100ರೂ. ಮುಟ್ಟಿದೆ. ವಿದ್ಯುತ್ ಬಿಲ್ ಗಗನಕ್ಕೆ ತಲುಪಿದೆ. 2 ವರ್ಷದಿಂದ ಕೋವಿಡ್ -19 ಕರೋನಾ ಬಂದಾಗಿನಿಂದ, ದಿನನಿತ್ಯ ಅವತ್ತಿನ ದುಡಿಮೆ ಮಾಡಿ ಬದುಕುವ ಬಡಜನರ ಕಷ್ಟ ಹೇಳತೀರದು. ದುಡಿಮೆ ಇಲ್ಲದೆ ಎಷ್ಟು ಜನ ಹಸಿವಿನಿಂದ ಸಾವನ್ನಪ್ಪಿದ್ದಾರೆ. ಕರೋನಾ ಕಾಲದಲ್ಲಿ ಎಷ್ಟು ಜನ ಅವರ ಗ್ರಾಮಗಳು, ಪಟ್ಟಣ ಸೇರಲು ಲಾಕ್‌ಡೌನ್ ಮಾಡಿದ ಸರ್ಕಾರ ನೇರವಾಗಿ ಬಸ್ಸು, ರೈಲುಗಳು ವಾಹನಗಳು ಸಂಚರಿಸದೆ ಇದ್ದಾಗ ನೇರದಾರಿಯಲ್ಲಿ ಕರೋನಾ ರೂಲ್ಸ್ಗೆ ಹೆದರಿ ರೈಲ್ವೆ ಹಳಿಗಳ ಮೂಲಕ ನಡೆದು ಹೋಗಲು ಹೋಗಿ 8-700 ಜನ ರೈಲ್ವೆ ಹಳಿಗಳ ಬಳಿ ಬಲಿಯಾಗಿ ದೇಶದ ಬಡಜನರು ಬಲಿಯಾಗಿದ್ದಾರೆ. ದೇಶದಲ್ಲಿ ರೈತ ಕಾರ್ಮಿಕರ ಜೀವನ 30 ರಿಂದ 40 ವರ್ಷ ಹಿಂದಕ್ಕೆ ಹೋಗಿದೆ. ವಿದ್ಯಾರ್ಥಿಗಳ ಜೀವನ ನಡು ದಾರಿಯಲ್ಲಿ ಅತಂತ್ರ ಪರಿಸ್ಥಿತಿಯಲ್ಲಿದ್ದರೆ ಉದ್ಯೋಗದಲ್ಲಿ ಇದ್ದ ಯುವಕರು ಅವರವರ ಗ್ರಾಮಗಳಿಗೆ ಬಂದು ಕೃಷಿ ಮತ್ತು ಉದ್ಯೋಗ ಖಾತ್ರಿ ಕೆಲಸ ಮಾಡುವ ಸ್ಥಿತಿ ಒದಗಿ ಬಂದಿದೆ. 
ಕರಾಳ ಪರಿಸ್ಥಿತಿಯಲ್ಲಿ ಅಗತ್ಯ ವಸ್ತು ಬೆಲೆ ಏರಿಕೆ ಗ್ಯಾಸ್‌ಸಿಲಿಂಡರ್ ಪೆಟ್ರೋಲ್ ವಿದ್ಯುತ್ ಬಿಲ್, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾದ ಸರಕಾರಗಳ ನೀತಿ ಖಂಡಿಸಿ  ಜಿಲ್ಲಾ ಪದಾಧಿಕಾರಿಗಳು ಅಡುಗೆ ಮನೆಯಿಂದ ಪ್ರತಿಭಟಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ  ಕೆರನಹಳ್ಳಿ ರಾಜು  ಎ. ತಿಪ್ಪೇಶಿ ,  ಗದಿಗೇಶ್ ಪಾಳೇದ್ ಹೆಚ್. ಹನುಮಂತಪ್ಪ ಹಾಲೇಕಲ್ಲು , ಮಂಜುನಾಥ ಮಳಲಕೆರೆ,  ಜೀವನ ನಿಟುವಳ್ಳಿ ಮತ್ತಿತರರಿದ್ದರು.