ಅಗತ್ಯಗಿಂತಲು ಹೆಚ್ಚಿನ ಬಿತ್ತನೆ ಬೀಜ ಲಭ್ಯ, ಆತಂಕ ಬೇಡ: ಸಿದ್ರಾಮಯ್ಯ ಸ್ವಾಮಿ

ಬೀದರ, ಜೂ.8:ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಅಗತ್ಯಕಿಂತ ಹೆಚ್ಚಿನ ಬಿತ್ತನೆ ಬೀಜ ಲಭ್ಯವಿದೆ. ಈಗಾಗಲೇ ಜಿಲ್ಲೆಯ ರೈತರಿಗೆ ಅಗತ್ಯವಿರುವ ಪ್ರಮಾಣಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಆದರಿಂದ ರೈತರು ಆತಂಕ ಪಡಬಾರದು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ ಹೇಳಿದರು.

ಅವರು ಬುಧವಾರ ಬೀದರ ತಾಲ್ಲೂಕಿನ ಚಿಲ್ಲರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರು ಬೀಜ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿ ಬೀಜಗಳನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರು ಸರ್ಕಾರ ಕೇಳಿರುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡದರೆ ಅವರು ತಮಗೆ ಬೀಜವನ್ನು ಸಬ್ಸಿಡಿ ದರದಲ್ಲಿ ವಿತರಿಸುವರು ಎಂದು ಹೇಳಿದರು.

ಸಾಮಾನ್ಯ ವರ್ಗಕ್ಕೆ ಸೇರಿದ ರೈತರು ತಮ್ಮ ಆಧಾರ ಕಾರ್ಡ, ಪಹಾಣಿಯನ್ನು ಸಲ್ಲಿಸಬೇಕು. ಸರಕಾರ ನಿಗದಿ ಪಡಿಸಿದ ದರದಲ್ಲಿ ಬೀಜ ಖರಿದಿಸಬೇಕು ಎಂದ ಅವರು ಆದಷ್ಟು ಬೇಗ ವರುಣ ದೇವ ಕೃಪೆ ತೊರಿ ಜೀವನ ಸಮೃದ್ದಿಗೋಳಿಸಲಿ ಎಂದರು.

ಗ್ರಾಮ ಪಂಚಾಯತ ಅಧ್ಯಕ್ಷ ಜೈರಾಜ ಮಾತನಾಡಿ ಸರ್ಕಾರದ ಯಾವುದೆ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯವಿದೆ. ರೈತರು ತಾಳ್ಮೆಯಿಂದ ಕೇಂದ್ರದಲ್ಲಿ ಹೆಸರು ನೊಂದಾಯಿಸಿ ಸರತಿಯಲ್ಲಿ ನಿಂತು ಬೀಜಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಆತ್ಮ ಯೋಜನೆಯ ಬೀದರ ತಾಲ್ಲೂಕ ವ್ಯವಸ್ಥಾಪಕ ಸತೀಶ ಶಟಗಾರ ಮಾತನಾಡಿ, ಮುಂಗಾರು ಮಳೆ ಪ್ರವೇಶಕ್ಕೆ ತಡವಾಗಿದ್ದು, ರೈತರು ಆತಂಕ ಪಡಬೇಡಿ . ಹವಮಾನ ಇಲಾಖೆ ತಿಳಿಸುರುವಂತೆ ಜೂನ್ 11 ರಂದು ಮಳೆ ಬರುವ ಸಾಧ್ಯತೆಯಿದೆ. ಮಳೆ ಬಂದ ನಂತರ ಬೀತ್ತನೆ ಪ್ರಕ್ರಿಯೆ ಆರಂಭಿಸುವಂತೆ ತಿಳಿಸಿದರು.

ಈ ಸಂದರ್ಭಲದಲ್ಲಿ ಬೀದರ ರೈತ ಸಂಪರ್ಕ ಕೇಂದ್ರ ಅಧಿಕಾರಿ ರಾಜಕುಮಾರ ಎಖ್ಳೆಲಿ, ಗ್ರಾಮ ಪಂಚಾಯತ ಸದಸ್ಯ ವಿಲ್ಸನ್, ಪೋಲಿದ್ ಅಧಿಕಾರಿ ಶೋಕತ್ ಅಲಿ, ಸಂತೋಷ, ಬಸವರಾಜ ಟೋಳೆ, ಮಹಾನಂದ, ವೀರಗೊಂಡ ಇತರರು ಉಪಸ್ಥಿತರಿದ್ದರು.