
ವಿಜಯಪುರ:ಮೇ.17: ಇತಿಹಾಸ, ಪರಂಪರೆ ಸಾಹಿತ್ಯ ಸಂಸ್ಕøತಿಯ ಜಾಗೃತೆಗಾಗಿ ಹಾಗೂ ಸಮಾಜದಲ್ಲಿರುವ ಬಡವ ಬಲ್ಲಿದರನ್ನು ಶೈಕ್ಷಣಿಕ, ಧಾಮಿಕ, ಸಾಮಾಜಿಕವಾಗಿ ಸರ್ವರನ್ನು ಒಗ್ಗೂಡಿಸಿದ ಕೀರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಎಂದು ಸಾಹಿತಿ ಎಂ.ಬಿ. ಕಟ್ಟಿಮನಿ ಹೇಳಿದರು.
ವೀರಶೈವ ಲಿಂಗಾಯತ ಸಾಂಸ್ಕøತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಸ್ಥಾಪನಾ ದಿನದ ಅಂಗವಾಗಿ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇದು ಪೂಜ್ಯರ ಕನಸಿನ ಕೂಸಾಗಿತ್ತು. ಅಂದಿನ ಹಿರಿಯ ಲಿಂಗಾಯತ ಗಣ್ಯರಾದ ಶಿರಸಂಗಿ ಲಿಂಗರಾಜ, ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪ, ಕರಡಿ ಸಿದ್ದಪ್ಪನವರ ನೇತೃತ್ವದಲ್ಲಿ ಸಂಸ್ಥೆಯ ಏಳ್ಗೆಗಾಗಿ ಕರ್ನಾಟಕದಾದ್ಯಂತ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ದೊರಕಿಸಿ ಕೊಡಲು ಅನೇಕ ಶಿಕ್ಷಣ ಸಂಸ್ಥೆಗಳನ್ನು ಉಚಿತ ಪ್ರಸಾದ ನಿಲಯಗಳನ್ನು ತೆರೆದು ಯುವಕರಿಗೆ ಉದ್ಯೋಗವನ್ನು ನೀಡಲು ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿದ ಪೂಜ್ಯರು ವೀರಶೈವ ಲಿಂಗಾಯತ ಸಮುದಾಯದ ಕುರಿತು ಇತಿಹಾಸ ಸಂಶೋಧಿಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಪೂಜ್ಯರ ಸ್ಮರಣೆ ಶಿವಾನುಭವದಲ್ಲಿ ಜ್ಞಾಪಿಸಿಕೊಂಡಿದ್ದು ತುಂಬಾ ಶ್ಲಾಘನೀಯ. ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾ ಪುರುಷರು ಹಾನಗಲ್ ಕುಮಾರಸ್ವಾಮಿಗಳು ಎಂದು ಹೇಳಿದರು.
ವೀರಶೈವ ಲಿಂಗಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಬಸವಧರ್ಮದಲ್ಲಿ ಶರಣರ ಚಿಂತನೆಗಳನ್ನು ಕೇಳಿ ಭಾಗಿಯಾಗುವುದರ ಮೂಲಕ ಬದುಕಿಗೆ ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು ಅಷ್ಟಾವರಣ ಪಂಚಾಚಾರ್ಯ ಕಟ್ಟುನಿಟ್ಟಾಗಿ ಪಾಲಿಸಬೇಕು. ನಾವು ಅವುಗಳನ್ನು ಅಮೃತ ನುಡಿಗಳು ಎಂದು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ಡಾ|| ಸೋಮಶೇಖರ ವಾಲಿ, ಎಸ್.ವೈ. ಗದಗ, ಶಿವಪುತ್ರ ಪೋಳ, ಬಸವರಾಜ ಒಂಟಗೂಡಿ, ಬಿ.ಎಚ್. ಬಾದರಬಂಡಿ, ಎಮ್. ಜಿ. ಯಾದವಾಡ, ಡಾ|| ವ್ಹಿ. ಡಿ. ಐಹೊಳ್ಳಿ, ಶಾರದಾ ಕೊಪ್ಪ, ಎಸ್.ಜಿ. ನಾಡಗೌಡ, ವಿವೇಕಾನಂದ ಪಾಟೀಲ, ಎಸ್.ಎಂ. ಕೋರಿ, ಎಂ.ಎಂ. ಅವರಾದಿ, ಎಂ.ವೈ. ಜಾವಡಗಿ, ರವೀಂದ್ರ ಮೆಡೆಗಾರ ಮಹಾರಾಜರು ಉಪಸ್ಥಿತರಿದ್ದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮ ಯಶಸ್ವಿಯಾಯಿತು.