ಅಖಿಲ ಭಾರತ ವೀರಶೈವ ಮಹಿಳಾ ಘಟಕಕ್ಕೆ ರಾಜ್ಯಾಧ್ಯಕ್ಷರ ಭೇಟಿ

ದಾವಣಗೆರೆ.ನ.೧೨;  ಅಖಿಲಾ ಭಾರತ ವೀರಶೈವ ಮಹಾಸಭಾ ಮಹಿಳಾ ರಾಜ್ಯಧ್ಯಕ್ಷರಾದ ಅರುಣಾದೇವಿ ದಾವಣಗೆರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಘಟಕ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂಬರುವ ಕಾರ್ಯಕ್ರಮದ ಸಮಾಲೋಚನೆ, ಜನಗಳಲ್ಲಿ ಅರಿವು, ಮಕ್ಕಳಿಗೆ ಲಿಂಗಧಾರಣೆ, ಹೆಣ್ಣುಮಕ್ಕಳಿಗೆ ಸ್ವಸಹಾಯ, ರೂಪರೇಷಗಳನ್ನು ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಈ ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಉಮಾ ರಮೇಶ್, ನಗರ ಅಧ್ಯಕ್ಷ ಪುಷ್ಪಾ ವಾಲಿ, ಹರಿಹರ ನಗರ ಅಧ್ಯಕ್ಷೆ ಆಶ್ವಿನಿ, ಮಾಜಿ ಮೇಯರ್ ಆಶ್ವಿನಿ, ಶೋಭ ಪಲ್ಲಾಗಟ್ಟಿ, ಪದಾಧಿಕಾರಿಗಳಾದ ದ್ರಾಕ್ಷಯಣಿ, ಶೋಭ ಕೋಟ್ರೇಶ್, ಮಂಜುಳ ಮಹೇಶ್, ಮಂಗಳಾ, ಸುಮಂಗಲ, ಮಂಜುಳ ಗದ್ದಗೇಶ್, ಕವಿತ ಲಕ್ಷ್ಮಿ, ರೂಪ, ರೇಖಾ, ಸುನಂದ, ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು.