ಬೀದರ:ಜೂ.15:ದೇಶಾದ್ಯಂತ ಇರುವ ವಿಶ್ವ ವಿದ್ಯಾಲಯಗಳ ಬೋಧಕೇತರ ನೌಕರರ ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೀಘ್ರವಾಗಿ ಇತ್ಯರ್ಥ ಪಡಿಸಬೇಕೆಂದು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ಬೋಧಕೇತರ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ ವೀರಭದ್ರಪ್ಪ ಉಪ್ಪಿನ್ ರವರು ಎರಡೂ ಸರಕಾರಗಳಿಗೆ ಕರೆ ನೀಡಿದರು. ಅವರು ಇಂದು ಒಕ್ಕೂಟದಿಂದ ರಾಷ್ಟ್ರ ವ್ಯಾಪಿ ಏಕಕಾಲಕ್ಕೆ ಹಮ್ಮಿಕೊಂಡಿದ್ದ “ಪ್ರತಿಭಟನೆ-ಬೇಡಿಕೆಗಳ ದಿನ” ದಿನಾಚರಣೆಯನ್ನು ಬೀದರ್ ನ ಪಶುವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಆಚರಿಸಿ ಮಾತನಾಡುತ್ತಿದ್ದರು.
ಪ್ರಮುಖ ಬೇಡಿಕೆಗಳು.ವಿಶ್ವ ವಿದ್ಯಾಲಯಗಳಲ್ಲಿ ಕಾರ್ಯರತರಾಗಿರುವ ಬೋಧಕೇತರ ನೌಕರರಿಗೆ ಯು. ಜಿ. ಸಿ. ವೇತನ ಶ್ರೆ?ಣಿಯನ್ನು ಜಾರಿಗೊಳಿಸುವುದು. ಹೊಸ ಪಿಂಚಣಿ ಯನ್ನು ರದ್ದು ಪಡಿಸಿ, ಹಳೇ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೆ ತರುವುದು.
*# ಗುತ್ತಿಗೆ ಆಧಾರಿತ ಕೆಲಸಗಾರರನ್ನು ಖಾಯಂಗೊಳಿಸುವುದು. ವಿಶ್ವ ವಿದ್ಯಾಲಯಗಳ ಮಂಡಳಿಗಳಲ್ಲಿ ಬೋಧಕೇತರ ನೌಕರರನ್ನು ನೇಮಿಸುವುದು. ಹೊಸ ಶಿಕ್ಷಣ ನೀತಿಯನ್ನು ಬೋಧಕೇತರ ಸದಸ್ಯರುಗಳಿರುವ ಪರಿಣಿತ ಸಮಿತಿಯಲ್ಲಿ ಕೂಲಂಕುಶವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದು. ವಿಶ್ವ ವಿದ್ಯಾಲಯಗಳ ಸ್ವಾಯತ್ತತೆ ಯನ್ನು ಕಾಪಾಡುವುದು, ಅವುಗಳಿಗೆ ಸಮುಚಿತ ಅನುದಾನವನ್ನು ನೀಡುವುದು
ಮೇಲ್ಕಂಡ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕುಲಪತಿಗಳ ಮುಖಾಂತರ ಮಾನ್ಯರಾದ ಪ್ರಧಾನ ಮಂತ್ರಿಗಳು, ಮುಖ್ಯ ಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಗಳಿಗೆ ಕಳಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳಾದ ಗಂಗಪ್ಪ ಸಾವಳೆ, ನಾರಾಯಣ್ ರಾವ ಕಾಂಬಳೆ, ಮುನಿಗ್ಯಾಲ, ಸಂಘದ ಅಧ್ಯಕ್ಷರಾದ ನಾಗಭೂಷಣ ಹುಗ್ಗೆ, ಸಂಗಾರಡ್ಡಿ, ನಾಗೇಂದ್ರ, ಸಾವನ್, ಗುರುಸಿದ್ದ, ಸಾವನ, ಎಸ್. ನಾಗೇಂದ್ರ ಮುಂತಾದವರು ಹಾಜರಿದ್ದರು.