ಅಖಿಲ ಭಾರತ ಕಾಂಗ್ರೆಸ್ ಪಕ್ಷ (ಎ.ಐ.ಸಿ.ಸಿ) ದ ಕಾರ್ದದರ್ಶಿಯಾಗಿ ಅಧಿಕಾರ ಸ್ವೀಕಾರ

ಮಂಗಳೂರು, ಡಿ.೩೧- ಅಖಿಲ ಭಾರತ ಕಾಂಗ್ರೆಸ್ (ಎ.ಐ.ಸಿ.ಸಿ) ಪಕ್ಷದ ಕಾರ್ಯದರ್ಶಿಯಾಗಿ ದೆಹಲಿಯ ಕಚೇರಿಯಲ್ಲಿ ಅಖಿತ ಕಾಂಗ್ರೆಸ್ ಪಕ್ಷದ (ಪ್ರಧಾನ ಕಾರ್ಯದರ್ಶಿ ಆಡಳಿತ) ಶ್ರೀ ಕೆ.ಸಿ.ವೇಣುಗೋಪಾಲ್ ಇವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಐವನ್ ಡಿ ಸೋಜ ಇವರಿಗೆ ಕೇರಳ ರಾಜ್ಯದ ಹೊಣೆಗಾರಿಕೆ ನೀಡಲಾಗಿದ್ದು, ಈಗಾಗಲೇ ತಿರುವನಂತಪುರಂಗೆ ತೆರಳಿ, ಪಕ್ಷದ ನಾಯಕರುಗಳ ಜೊತೆ ಚರ್ಚಿಸಿ, ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆ ರೂಪುರೇಖೆಗಳನ್ನು ತಯಾರಿಸಲಾಗಿದ್ದು, ದೆಹಲಿಯಲ್ಲಿ ಕೇರಳ ರಾಜ್ಯದ ಹಿರಿಯ ನಾಯಕರಾದ ಶ್ರೀ ಎ.ಕೆ.ಆಂಟನಿ, ಶ್ರೀ ವಿನ್ಸೆಂಟ್ ಜಾರ್ಜ್, ಶ್ರೀ ಮುರಳೀಧರ ಮತ್ತು ಕೇರಳ ರಾಜ್ಯದ ಉಸ್ತುವಾರಿ ಪ್ರಧಾನ ಕಾರ‍್ಯದರ್ಶಿಗಳಾದ ಥಾರೀಖ್ ಅನ್ವರ್ ಇವರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.