ಅಖಿಲ ಭಾರತ ಕರಾಳ ದಿನದ ಅಂಗವಾಗಿ ಎಐಎಮ್‍ಎಸ್‍ಎಸ್ ನಿಂದ ಕಪ್ಪು ಬಾವುಟ ಪ್ರದರ್ಶಿಸಿ, ಆನ್‍ಲೈನ್ ಪ್ರತಿಭಟನೆ

ವಿಜಯಪುರ, ಮೇ.27-ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟದ ಬಗ್ಗೆ ತಮಗೆ ಈಗಾಗಲೇ ತಿಳಿದಿದೆ. ಕೇಂದ್ರ ಸರ್ಕಾರದರೈತ ವಿರೋಧಿ-ಕಾಪೆರ್Çರೇಟ್ ಪರ ಮೂರು ಕರಾಳ ಕೃಷಿ ನೀತಿಗಳನ್ನು ವಿರೋಧಿಸಿ ಲಕ್ಷಾಂತರ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಚಲವಾದ ಹೋರಾಟದಲ್ಲಿ ತೊಡಗಿದ್ದಾರೆ. ಅಸಂಖ್ಯಾತ ರೈತ ಮಹಿಳೆಯರು ಕೂಡ ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಈ ಹೋರಾಟದಲ್ಲಿ 500ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರೂ ಕೇಂದ್ರ ಸರ್ಕಾರ ದಿವ್ಯ ಮೌನವಹಿಸುವುದು ಖಂಡಿಸಿದೆ.
ಇಂದಿಗೆ ಈ ಧೀರೋದ್ಧಾತ ಹೋರಾಟ ಆರು ತಿಂಗಳುಗಳನ್ನು ಪೂರೈಸಿದೆ, ಹೋರಾಟಕ್ಕೆ ನಾಯಕತ್ವ ನೀಡುತ್ತಿರುವ ಸಂಯುಕ್ತಕಿಸಾನ್ ಮೋರ್ಚಾ ಈ ದಿನವನ್ನು ಅಖಿಲ ಭಾರತ ಕರಾಳ ದಿನವನ್ನಾಗಿ ಆಚರಿಸ ಬೇಕೆಂದು ಕರೆ ನೀಡಿದೆ. ನಮ್ಮ ಸಂಘಟನೆ ಎ.ಐ.ಎಮ್.ಎಸ್.ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ) ವಿಜಯಪುರ ಜಿಲ್ಲಾ ಸಮಿತಿ ಆರಂಭದಿಂದಲೂ ರೈತರ ಹೋರಾಟವನ್ನು ಬೆಂಬಲಿಸುತ್ತಿದೆ. ಈ ನೀತಿಗಳಿಂದ ರೈತರು ಹಾಗೂ ಜನಸಾಮಾನ್ಯರುಎದುರಿಸುವಗಂಭೀರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಾ, ಹೋರಾಟವನ್ನು ಬಲಪಡಿಸುವ ಕಾರ್ಯದಲ್ಲಿ ಸತತವಾಗಿತೊಡಗಿದೆ.
ಅಂತೆಯೇ, ಇಂದುಕೂಡ ಅಖಿಲ ಭಾರತ ಕರಾಳ ದಿನವನ್ನು ನಮ್ಮ ಸಂಘಟನೆ ಬೆಂಬಲಿಸುತ್ತಿದೆ. ಈ ಹಿನ್ನೆಲೆಯಲ್ಲಿರೈತರ ಐತಿಹಾಸಿಕ ಹೋರಾಟವನ್ನು ಬೆಂಬಲಿಸಲು ಮತ್ತು ಹೋರಾಟವನ್ನು ಯಶಸ್ವಿಗೊಳಿಸಲು ಪೂರಕವಾಗಿ ‘ರೈತರಜೊತೆ ನಿಲ್ಲೋಣ! ಅಖಿಲ ಭಾರತ ಕರಾಳ ದಿನವನ್ನು ಯಶಸ್ವಿಗೊಳಿಸೋಣ! ಎಂಬ ಘೋಷಣೆಯೊಂದಿಗೆ ಧಾರವಾಡ ಜಿಲ್ಲೆಯಾದ್ಯಂತ ಹಲವು ಹಳ್ಳಿಗಳು, ಬಡಾವಣೆಗಳಲ್ಲಿ ಮಹಿಳೆಯರು ಎ.ಐ.ಎಮ್.ಎಸ್.ಎಸ್ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ, ಕಪ್ಪು ಮಾಸ್ಕ ಧರಿಸಿ ಆನ್ ಲೈನ್ ಪೋಸ್ಟರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎ.ಐ.ಎಮ್.ಎಸ್.ಎಸ್‍ನ ಜಿಲ್ಲಾ ಸಂಚಾಲಕರಾದ ಶಿವಬಾಳಮ್ಮ ಕೊಂಡುಗೂಳಿ, ಸಹ ಸಂಚಾಲಕರಾದ ಗೀತಾ ಹೆಚ್, ಸದಸ್ಯರಾದ ಶಿವರಂಜನಿ ಎಸ್ ಬಿ, ಸುಮಯ, ಮಹಾದೇವಿ ಧರ್ಮಶೆಟ್ಟಿ, ರಶ್ಮಿ ದೇವರಹಿಪ್ಪರಗಿ ಹಾಗೂ ಲತಾತರಾಸೆ, ಕಮಲಾ ತೇಲಿ, ಮೊದಲಾದವರು ಭಾಗವಹಿಸಿದ್ದರು.