ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ಗೆ ರಾಣಿ ಸತ್ಯಮೂರ್ತಿ ಅಧ್ಯಕ್ಷೆ

ಬೀದರ್: ಮೇ.5:ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ರಾಣಿ ಸತ್ಯಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ಪರಿಷತ್ ರಾಜ್ಯ ಅಧ್ಯಕ್ಷ ರಘುನಂದನ್ ಭಟ್ ಅವರು ಈ ನೇಮಕ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಾಣಿ ಸತ್ಯಮೂರ್ತಿ ಅವರಿಗೆ ಪರಿಷತ್ ಸಂಘಟನೆ ಹೊಣೆ ಕೊಡಲಾಗಿದೆ.

ಜಿಲ್ಲಾ ಘಟಕದ ಪದಾಧಿಕಾರಿಗಳು: ಡಾ. ಜಗದೇವಿ ತಿಬಶೆಟ್ಟಿ, ಡಾ. ಶ್ರೇಯಾ ಮಹೇಂದ್ರಕರ್, ಮಲ್ಲಿಕಾರ್ಜುನ ಧಬಾಲೆ (ಉಪಾಧ್ಯಕ್ಷರು), ನಾಗೇಶ ಸ್ವಾಮಿ ಮಸ್ಕಲ್ (ಪ್ರಧಾನ ಕಾರ್ಯದರ್ಶಿ), ಸುಧಾರಾಣಿ (ಸಹ ಕಾರ್ಯದರ್ಶಿ), ಸ್ವರೂಪಾ ನಾಗೂರೆ (ಖಜಾಂಚಿ), ಶಿವಕುಮಾರ ಉಪ್ಪೆ (ಗೌರವ ಸಲಹೆಗಾರ), ಉಮಾಕಾಂತ ಮೀಸೆ, ಬಸಯ್ಯ ಸ್ವಾಮಿ ಮತ್ತು ಬಸವರಾಜ ಮೂಲಗೆ (ಕಾರ್ಯಕಾರಿಣಿ ಸದಸ್ಯರು).