ಅಖಿಲ ಕರ್ನಾಟಕ ಶ್ರೀ ಭುವನೇಶ್ವರಿ ಸೇನಾ ಸಮಿತಿ : ಸನ್ಮಾನ ಕಾರ್ಯಕ್ರಮ

ರಾಯಚೂರು.ನ.೦೫- ನಗರದ ವಾರ್ಡ್ ೨೦ ರಲ್ಲಿ ಹರಿಜನವಾಡದ ಶ್ರೀ ಕಂಚು ಮಾರೆಮ್ಮ ದೇವಿಯ ಗುಡಿಯ ಆವರಣದಲ್ಲಿ ಅಖಿಲ ಕರ್ನಾಟಕ ಶ್ರೀ ಭುವನೇಶ್ವರಿ ಸೇನಾ ಸಮಿತಿ ವತಿಯಿಂದ ತಮೇಶ್ ರವರು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಮ್ಮ ಸಮಾಜದ ದಲಿತ ಸಾಹಿತಿಗಳು ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಬಾಬು ಭಂಡಾರಿಗಲ್ ಇವರಿಂದ ಧ್ವಜಾರೋಹಣ ನೆರವೇರಿಸಲಾಯಿತು.
ನಗರಸಭೆ ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರಿಂದ ಮಾತೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಬಾಬು ಭಂಡಾರಿಗಲ್ ಹಾಗೂ ನರಸಮ್ಮ ನರಸಿಂಹಲು ಮಾಡಗಿರಿ ಅವರಿಗೆ ತಮೇಶ್ ರವರ ಬಳಗದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.