ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಜಿಲ್ಲಾದ್ಯಕ್ಷರಾಗಿ ಜೆ.ಎಮ್ ಬಸವರಾಜ ಸ್ವಾಮಿ ಆಯ್ಕೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.4- ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ (ರಿ) ಬೆಂಗಳೂರು. ರಾಜ್ಯಾಧ್ಯಕ್ಷರಾದ ಬಿ. ಡಿ. ಹಿರೇಮಠ್ ರವರ ಆದೇಶದಂತೆ ಎಲ್ಲಾ ಹರ ಗುರು ಚರಮೂರ್ತಿ ಗಳ ಅಭಿಪ್ರಾಯದಂತೆ ದಿನಾಂಕ. 03.08.2022 ರಂದು ಬಳ್ಳಾರಿ ನಗರದ ಕಲ್ಯಾಣ ಸ್ವಾಮಿ ಗಳ  ಮಠದಲ್ಲಿ  ನಡೆದ ಬೇಡ ಜಂಗಮರ ಸಭೆಯಲ್ಲಿ ಸಮಾಜದ ಮುಖಂಡರಾದ ಶ್ರೀ ಜೆ.ಎಮ್ ಬಸವರಾಜ ಸ್ವಾಮಿ ರವರನ್ನು  ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ(ರಿ)ದ ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.  ಈ ಸಭೆಯ ಸಾನಿಧ್ಯವನ್ನು ಹರಗಿನಡೋಣಿಯ ಪಂಚವಣಿಗಿ ಸಂಸ್ಥಾನ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಈ ಸಂಧರ್ಭದಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ ಶ್ರೀ ಕೆ.ಎಮ್ ಮಹೇಶ್ವರಸ್ವಾಮಿ, ಚಾ.ಮ ಗಂಗಾಧರಯ್ಯ ಸ್ವಾಮಿ, ಬಿ.ಎಮ್. ಎರಿಸ್ವಾಮಿ, ಹೆಚ್.ಕೆ ಗೌರಿಶಂಕರ ಸ್ವಾಮಿ,ಜಿ.ಮಹಾಲಿಂಗಯ್ಯ.ಉಮಾಶಂಕರ ಸ್ವಾಮಿ, ಮೃತ್ಯುಂಜಯ ಸ್ವಾಮಿ, ನಟರಾಜ ಹಿರೇಮಠ್, ಬಿ.ಎಮ್ ಡಿ ಮಂಜುನಾಥ್, ಅಮರೇಶ್ ಹೆಚ್. ಎಮ್. ಶ್ರೀ ಮತಿ ನಾಗರತ್ನ ಮಂಜುನಾಥ್ ಹಾಗೂ ಇತರ ಬೇಡ ಜಂಗಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.