ಅಖಿಲಭಾರತ ಮುಷ್ಕರಕ್ಕೆ‌ಬೆಂಬಲಿಸಿ ಎಐಟಿಯುಸಿ ಪ್ರತಿಭಟನೆ.

ಜಗಳೂರು.ಸೆ.೨೫: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರೆನೀಡಿದ್ದ ಜಂಟಿ ಸಂಘಟನೆಗಳ ಯೋಜನೆಗಳ ಕೆಲಸಗಾರರ ಅಖಿಲಭಾರತ ಮುಷ್ಕರಕ್ಕೆ ಬೆಂಬಲಿಸಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತದಮೂಲಕ ಆಡಳಿತ  ಸರ್ಕಾರದ  ವಿರುದ್ದ ಘೋಷಣೆ ಕೂಗುತ್ತಾ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಛೇರಿ ಮುಂಬಾಗ ಜಮಾಯಿಸಿ ಲಿಖಿತ ಮನವಿ ಸಲ್ಲಿಸಿದರು.ಸಂಘಟನೆ ಗೌರವಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ,ಅಂಗನವಾಡಿ ಕಾರ್ಯಕರ್ತೆಯರು ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿದ್ದು ನಿರ್ದಿಷ್ಟ ಕಾಲಮಿತಿಯಲ್ಲಿ ಉಚಿತವಾಗಿ ವಾಕ್ಸಿನ್ ನ್ನು ಕಡ್ಡಾಯವಾಗಿ ನೀಡಬೇಕು.ಕೊವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಅಕಾಲಿಕ ನಿಧನ ಹೊಂದಿದವರಿಗೆ 50 ಲಕ್ಷ ಪರಿಹಾರ  ಆರೋಗ್ಯ ವಿಮೆ ಘೋಷಿಸಬೇಕು.ಹೆಚ್ಚುವರಿಯಾಗಿ ಕೋವಿಡ್ 19 ಸೇವೆಗೆ ಮಾಸಿಕ 10 ಸಾವಿರ ಭತ್ಯೆ ನೀಡಬೇಕು ಸೊಂಕಿತ ಪೀಡಿತರಿಗೆ ತಲಾ 10 ಲಕ್ಷ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಕೆ.ಮಂಜಪ್ಪ ಮಾತನಾಡಿ,46 ನೇ ಲೇಬರ್ ಕಾನ್ಫರೆನ್ಸ್ ಅಧಿವೇಶನದ ಶಿಫಾರಸ್ಸಿನಂತೆ ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ ಮಾಸಿಕ 21‌ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು.ಸೇವಾಭದ್ರತೆಗಾಗಿ ವಿವಿಧ ರಾಷ್ಟ್ರೀಯ ವಿಮಾ ಯೋಜನೆ‌ಕಲ್ಪಿಸಬೇಕು.ಐಸಿಡಿಎಸ್ ಖಾಸಗೀಕರಣದ ಹುನ್ನಾರ ಕೈಬಿಡಬೇಕು.ಶ್ರೀಮಂತರಿಗೆ ಅಧಿಕ  ತೆರಿಗೆ ವಿಧಿಸಿ ಆರ್ಥಿಕ ಸಂಗ್ರಹಣೆ ಹೆಚ್ಚಿಸಬೇಕು.ಸೆಂಟ್ರಲ್  ವಿಸ್ತಾ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷೆ ಹಾಲಮ್ಮ,ಉಪಾಧ್ಯಕ್ಷೆ ಶಾಂತವೀರಮ್ಮ,ಖಜಾಂಚಿ ಪುಷ್ಪಾಂಜಲಿ,ಸಹಕಾರ್ಯದರ್ಶಿ ನಾಗರತ್ನಮ್ಮ,ಪದಾಧಿಕಾರಿಗಳಾದ ವೀರಣ್ಣ,ತಿಪ್ಪೇಸ್ವಾಮಿ,ಮಧು ದೇವಿಕೆರೆ ,ಗೌರಮ್ಮ,ಶಶಿಕಲಾ,ರೂಪ,ತಿಪ್ಪಮ್ಮ,ನಾಗಮ್ಮ,ಭರಮಕ್ಕ,ಮಂಜುಳಾ,ಪವಿತ್ರ,ಸುಮಾ,ಲಕ್ಷ್ಮಿದೇವಿ,ಶಿವಮ್ಮ,ಹಸೀನಾಬೇಗಂ,ಸೇರಿದಂತೆ ಭಾಗವಹಿಸಿದ್ದರು.