ಅಖಂಡ ಭಾರತಕ್ಕೆ ಸಂಕಲ್ಪ: ಪಂಜಿನ ಮೆರವಣಿಗೆ

ಬೀದರ:ಆ.16:ಹಿಂದೂ ಜಾಗರಣ್ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಸೋಮವಾರ ಸಂಜೆ ಬೃಹತ್ ಪಂಜಿನ ಮೆರವಣಿಗೆ ಜರುಗಿತು.

ವೇದಿಕೆಯ ನೂರಾರು ಕಾರ್ಯಕರ್ತರು ಭಗವಾ ಧ್ವಜ, ಕೊರಳಲ್ಲಿ ಕೇಸರಿ ಶಾಲು ಧರಿಸಿ, ಪಂಜುಗಳೊಂದಿಗೆ ಮೆರವಣಿಗೆಯಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಶಹಾಗಂಜ, ಗವಾನ್ ಚೌಕ್, ಚೌಬಾರ, ಸಿದ್ದಿ ತಾಲೀಮ್, ನಯಾ ಕಮಾನ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತದ ಮೂಲಕ ಹಾದು ಪುನಃ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ರಾತ್ರಿ ನಡೆದ ಬಹಿರಂಗ ಸಭೆಯಲ್ಲಿ ಅಖಂಡ ಭಾರತಕ್ಕೆ ಸಂಕಲ್ಪ ಮಾಡಲಾಯಿತು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶಿವಶರಣಪ್ಪ ಪಾಟೀಲ, ಪ್ರಾಂತ ಶಾರೀರಿಕ ಪ್ರಮುಖ ನಾಗೇಶ ಚಿನ್ನರೆಡ್ಡಿ, ದತ್ತಾತ್ರೆ ದಾಚೆಪಳ್ಳಿ, ಈಶ್ವರ ಸಿಂಗ್ ಠಾಕೂರ್ ಮೊದಲಾದವರು ಇದ್ದರು.