ಅಖಂಡ ಬಳ್ಳಾರಿ ಜಿಲ್ಲೆ ಹಾಗೇ ಉಳಿಸಿ – ಬಷೀರ್

ಕೂಡ್ಲಿಗಿ.ನ.20:- ಹಂಪಿ, ತುಂಗಾಭದ್ರ ಡ್ಯಾಂ ಇಲ್ಲದ ಬಳ್ಳಾರಿ ಜಿಲ್ಲೆಯನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಅಖಂಡ ಜಿಲ್ಲೆಯನ್ನು ಒಡೆಯಲು ಹೊರಟಿರುವ ಆನಂದ್ ಸಿಂಗ್ ಅವರು ಈ ಕೂಡಲೇ ರಾಜಿನಾಮೆ ನೀಡಬೇಕು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಶ್ರೀರಾಮುಲು ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕೆಂದು ಗುಡೇಕೋಟೆಯ ಯುವಮುಖಂಡ ಬಷೀರ್ ಅವರು ಒತ್ತಾಯಿಸಿದ್ದಾರೆ.
ಅವರು ಗುರುವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ಅಧಿಕಾರ ಸ್ವಾರ್ಥಕ್ಕಾಗಿ ಆನಂದ್ ಸಿಂಗ್ ಸೇರಿದಂತೆ 17ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅಧಿಕಾರದ ಆಸೆಗೆ ಹೊರತೂ ಇವರು ಬಿಜೆಪಿಗೆ ಮುತ್ತುಗಳಲ್ಲ ಕಬ್ಬಿಣದ ಕಡಲೆಗಳು ಇದ್ದಹಾಗೇ, ಆನಂದ್ ಸಿಂಗ್ ಅಧಿಕಾರದ ಆಸೆಗೆ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಯಾಗಿದ್ದು ಈಗ ಬಳ್ಳಾರಿ ಜಿಲ್ಲೆಯನ್ನು ತುಂಡು ಮಾಡಲು ಹೊರಟಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು. ಕಂದಾಯ ಇರುವ ತಾಲೂಕುಗಳನ್ನು ಒಂದು ಕಡೆಗೆ ಕಂದಾಯ ಕಡಿಮೆ ಇರುವ ತಾಲೂಕುಗಳನ್ನು ಒಂದು ಕಡೆಗೆ ವಿಭಜಿಸಲು ಹೊರಟಿರುವುದು ಅವರ ಪ್ರತ್ತ್ಯೆಕತಾವಾದವನ್ನು ತೋರಿಸುತ್ತದೆ. ಕೂಡ್ಲಿಗಿ ತಾಲೂಕು ಬಳ್ಳಾರಿಗೆ ಸೇರ್ಪಡೆಯಾದರೆ ಹಿಂದುಳಿದ ತಾಲೂಕುಗಳಷ್ಟೇ ಬಳ್ಳಾರಿ ಜಿಲ್ಲೆಯಲ್ಲಿ ಉಳಿಯುತ್ತವೆ ಈ ರೀತಿಯಾಗಿ ವಿಭಜಿಸುವುದು ಸಮಂಜಸವೇ ಎಂದು ಬಷೀರ್ ಪ್ರಶ್ನಿಸಿದರು.
ವಿಜಯನಗರ ಜಿಲ್ಲೆಯನ್ನು ಮಾಡಲು ಹೊರಟಿರುವ ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಏಕೆ ಇರಬೇಕು ತಕ್ಷಣವೇ ರಾಜಿನಾಮೆ ಕೊಡಬೇಕು, ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಬೇಕು ಇಲ್ಲವೇ ಅಖಂಡ ಬಳ್ಳಾರಿ ಜಿಲ್ಲೆ ಹಾಗೆಯೇ ಉಳಿಯಬೇಕೆಂದು ಗುಡೇಕೋಟೆ ಬಷೀರ್ ತಿಳಿಸಿದ್ದಾರೆ.