ಅಖಂಡ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗಳಿವರು



:ಬಿಜೆಪಿಯಿಂದ:
* ಬಳ್ಳಾರಿ ಗ್ರಾಮೀಣ: ಬಿ.ಶ್ರೀರಾಮುಲು
* ಬಳ್ಳಾರಿ ನಗರ: ಸೋಮಶೇಖರ ರೆಡ್ಡಿ
* ಸಿರುಗುಪ್ಪ: ಸೋಮಲಿಂಗಪ್ಪ
* ಕಂಪ್ಲಿ: ಸುರೇಶ್ ಬಾಬು
*8 ರಲ್ಲಿ 4 ಜನ‌ ಹೊಸಬರು
* ಸಂಡೂರು: ಶಿಲ್ಪಾ ರಾಘವೇಂದ್ರ
* ವಿಜಯನಗರ: ಸಿದ್ದಾರ್ಥ ಸಿಂಗ್
* ಕೂಡ್ಲಿಗಿ: ಲೋಕೇಶ್ ನಾಯಕ
* ಹಡಗಲಿ: ಕೃಷ್ಣಾ ನಾಯಕ
* ಹರಪನಹಳ್ಳಿ, ಹಗರಿ ಬೊಮ್ಮನಹಳ್ಳಿ ಘೋಷಣೆ ಬಾಕಿ ಇದೆ


:ಕಾಂಗ್ರೆಸ್ ನಿಂದ:
* ಬಳ್ಳಾರಿ ಗ್ರಾಮೀಣ: ಬಿ.ನಾಗೇಂದ್ರ
* ಕಂಪ್ಲಿ: ಜೆ.ಎನ್‌ಗಣೇಶ್
* ಸಂಡೂರು: ಈ. ತುಕರಾಂ
* ವಿಜಯನಗರ: ಹೆಚ್.ಆರ್.ಗವಿಯಪ್ಪ
* ಕೂಡ್ಲಿಗಿ: ಡಾ.ಶ್ರೀನಿವಾಸ್ ಎನ್.ಟಿ.
* ಹಗರಿಬೊಮ್ಮನಹಳ್ಳಿ: ಭೀಮಾನಾಯ್ಕ
* ಹಡಗಲಿ: ಪಿ.ಟಿ.ಪರಮೇಶ್ವರ ನಾಯ್ಕ
* ಹರಪನಹಳ್ಳಿ, ಬಳ್ಳಾರಿ ನಗರ ಸಿರುಗುಪ್ಪ ಘೋಷಣೆ ಬಾಕಿ ಇದೆ
.
(ಎನ್.ವೀರಭದ್ರಗೌಡ)
ಬಳ್ಳಾರಿ, ಏ.12: ಅಖಂಡ ಜಿಲ್ಲೆಯ 10 ಕ್ಷೇತ್ರಗಳ ಪೈಕಿ ಈಗಾಗಲೇ ಕಾಂಗ್ರೆಸ್ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ‌ ಬಿಜೆಪಿ ನಿನ್ನೆ ರಾತ್ರಿ 8 ಕ್ಷೇತ್ರಗಳಿಗೆ ಘೋಷಣೆ ಮಾಡಿದೆ. ಇದರಲ್ಲಿ ಹಾಲಿ ಮೂವರು ಶಾಸಕರಿಗೆ, ಓರ್ವ ಮಾಜಿ ಶಾಸಕ ಮತ್ತು ನಾಲ್ವರು ಹೊಸಬರಿಗೆ ಘೋಷಣೆ ಮಾಡಿದ್ದರೆ ಎರೆಡು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿದಿದೆ.
 ಬಳ್ಳಾರಿ ಗ್ರಾಮೀಣ:
ಸಂಡೂರಂತೆ, ಕೂಡ್ಲಿಗಿಯಂತೆ, ಬಳ್ಳಾರಿ ಗ್ರಾಮೀಣವಂತೆ ಹೀಗೆ ಒಂದೊಂದು ಕ್ಷೇತ್ರದಲ್ಲಿ ಹರದಾಡುತ್ತಿದ್ದ ಸಚಿವ ಶ್ರೀರಾಮುಲು ಅವರ ಹೆಸರು ಕೊನೆಗೂ ನಿರೀಕ್ಷೆಯಂತೆ ಬಳ್ಳಾರಿ ಗ್ರಾಮೀಣಕ್ಕೆ ಪ್ರಕಟವಾಗಿದೆ ಕಾಂಗ್ರೆಸ್ ನ ಹಾಲಿ ಶಾಸಕ ಹಳೆಯ ಸ್ನೇಹಿತ ಬಿ.ನಾಗೇಂದ್ರ ವಿರುದ್ದ ಸೆಣಸಬೇಕಿದೆ. ಮರಳಿ ತಮ್ಮ ಕ್ಷೇತ್ರವನ್ನು ಪಡೆಯಬೇಕಿದೆ. ಸಧ್ಯ ಈ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಲಿದೆ.
ಬಳ್ಳಾರಿ ನಗರ:
ಈ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಬಹುತೇಖ ಭರತ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಇನ್ನು ಕೆಆರ್ ಪಿಪಿ ಪಕ್ಷದಿಂದ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ,  ಇವರ ನಡುವೆ ಸ್ಪರ್ಧೆ ಏರ್ಪಡಲಿದೆ. ರೆಡ್ಡಿ ತ್ರಯರ ಹೋರಾಟಕ್ಕೆ ಈ ಕ್ಷೇತ್ರ ಸಾಕ್ಷಿಯಾಗಲಿದೆ. ಇವರ ಮದ್ಯೆ ಜೆಡಿಎಸ್ ನ‌ಮುನ್ನಾಬಾಯ್ ನಾನು ಕಣದಲ್ಲಿರುವೆ ಎಂದಿದ್ದಾರೆ. ಈ ಕ್ಷೇತ್ರ ಮತದಾರರ ಮಟ್ಟಿಗೆ ಸುಗ್ಗಿಯಾಗಲಿದೆ ಎಂಬ ನಿರೀಕ್ಷೆ ಇದೆ.
 ಸಿರುಗುಪ್ಪ:
ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನ್ನು ಬೇರೆಯವರಿಗೆ ಕೊಡುತ್ತಾರಂತೆ ಎಂಬ ಸುಳ್ಳು ವದಂತಿಗೆ ತೆರೆ ಎಳೆದು. ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪಗೆ ಟಿಕೆಟ್ ಘೋಷಣೆಯಾಗಿದ್ದು ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಕ್ಕೆ ಅವರು ಸಜ್ಜಾಗಿದ್ದಾರೆ.
ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿಲ್ಲ. ಬಹುತೇಕ ಮಾಜಿ ಶಾಸಕ ಬಿ.ಎಂ.ನಾಗರಾಜ್ ಅವರಿಗೆ ದೊರೆಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ಮುರುಳಿಕೃಷ್ಣ.
ಟಿಕೆಟ್ ಸಿಗದಿದ್ದರೆ ಮುರುಳಿ ಕೃಷ್ಣ ಬಂಡಾಯ ಇಲ್ಲ ಜೆಡಿಎಸ್ ನಿಂದಲೂ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದಿನ‌ ಬೆಳವಣಿಗೆ  ಕಾದು ನೋಡಬೇಕಿದೆ.
ಕೆಆರ್ ಪಿಪಿಯಿಂದ  ಧರಪ್ಪ  ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತಿದೆ.    
ಕಂಪ್ಲಿ:
ಈ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬುಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಜೆ.ಎನ್.ಗಣೇಶ್. ಕಳೆದ ಬಾರಿ ಅಲ್ಪ ಮತಗಳಿಂದ ಗೆದ್ದಿದ್ದ  ಗಣೇಶ್ ಗೆ ಈ ಬಾರಿ ಅಗ್ನಿ ಪರೀಕ್ಷೆ,  ಜೆಡಿಎಸ್  ಅಭ್ಯರ್ಥಿ ರಾಜು ನಾಯಕ ಸ್ಪರ್ಧೆ, ಮಾಜಿ ಶಾಸಕ ನಾರಾಯಣರೆಡ್ಡಿಯವರ   ಜೊತೆಗಿನ ಹಳಸಿದ ಸಂಬಂಧ. ನಾರಾಯಾಣಪ್ಪನ ನಿಲುವು  ಈ ಬಾರಿ ಗಣೇಶ್ ಗೆ ಅನೇಕ ವಿಘ್ನಗಳನ್ನು ಎದುರಿಸಬೇಕಿದೆ. ಹಾಗಂತ ಸುರೇಸ್ ಬಾಬುಗೆ ಸುಲಭ ಎನ್ನುವಂತಿಲ್ಲ ಈ ಕ್ಷೇತ್ರದ ಮತದಾರರ ಮನಸ್ಸು ಕೊನೆ ದಿನಗಳಲ್ಲಿ ಹೇಗೆ ಬದಲಾಗುತ್ತೆ ಎಂಬುದರ ಮೇಲೆ   ಇವರ ಗೆಲುವು ನಿಶ್ಚಿತವಾಗಬೇಕಿದೆ.
 ಸಂಡೂರು:
ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ  ಶಿಲ್ಪ ರಾಘವೇಂದ್ರ ಅವರ ಹೆಸರನ್ನು ಘೋಷಣೆ ಮಾಡಿದೆ. ಬಳ್ಳಾರಿ‌ ಜಿಲ್ಲೆಯ ಬಿಜೆಪಿಯಿಂದ ಸ್ಪರ್ಧೆ ಮಾಡುವ ಮೂರನೇ  ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಇದೇ ಕ್ಷೇತ್ರದಿಂದ 2004 ರಲ್ಲಿ ಪ್ರತಿಭಾ ಕೊಟ್ರಪ್ಪ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಇವರಲ್ಲದೆ ಹಗರಿಬೊಮ್ಮಹಳ್ಳಿಯಿಂದ ಪದ್ಮಾ ವಿಠ್ಠಲ್ ಒಮ್ಮೆ ಸ್ಪರ್ಧೆ ಮಾಡಿದ್ದರು.
ಶಿಲ್ಪಾ  ಅವರು ಈ ಕ್ಷೇತ್ರದ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಪತ್ನಿ. ರಾಘವೇಂದ್ರ ಅವರು ಕೋವಿಡ್ ನಲ್ಲಿ ತೀರಿಕೊಂಡಿದ್ದರಿಂದ. ಕಾರ್ತಿಕ್ ಘೋರ್ಪಡೆ ಅವರ ಅಭಿಲಾಷೆಯಂತೆ ಇವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ತುಕರಾಂ. ಮಾಜಿ ಸಚಿವರು, ಹಾಲಿ ಶಾಸಕರು, ಲಾಡ್ ಕುಟುಂಬದ ಹಿತರಕ್ಷಕರು, ಇವರ ನಾಲ್ಕನೇ ಬಾರಿಯ ಗೆಲುವಿನ ಓಟಕ್ಕೆ ಕ್ಷೇತ್ರದ ಪರಿಚಯವಿಲ್ಲದ ಶಿಲ್ಪ ತಡೆಯೊಡ್ಡುವರೇ ಕಾದು‌ನೋಡಬೇಕಿದೆ.
ಇನ್ನು ಇಲ್ಲಿ ಬಿಜೆಪಿ ಟಿಕೆಟ್ ಬಯಸಿ ಪಕ್ಷ ಸಂಘಟನೆ ಮಾಡಿದ್ದ ಕೆ.ಎಸ್.ದಿವಾಕರ್ ಟಿಕೆಟ್ ವಂಚಿರಾಗಿರುವುದರಿಂದ ಅವರ ನಡೆ ಏನು ಗೊತ್ತಿಲ್ಲ. ಕೆ.ಆರ್.ಪಿ.ಪಿ ಯಂತ್ ಜಂಪ್ ಆಗುವರೇ ಇಲ್ಲ ಪಕ್ಷದ ತೀರ್ಮಾನಕ್ಕೆ ಸುಮ್ಮನಾಗುವರೇ ಎಂಬುದನ್ನು ಕಾ್ಉ ನೋಡಬೇಕಿದೆ. ಅಲ್ಲದೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಕುರೆಕುಪ್ಪ ಸೋಮಪ್ಪ ಕಣಕ್ಕಿಳಿಯಲಿದ್ದಾರೆ. ಇವರ ಸ್ಪರ್ಧೆ ಯಾರ ಗೆಲುವಿಗೆ ಅಡ್ಡಿಯಾಗುತ್ತೆ ತಿಳಿಯಬೇಕಿದೆ.
ವಿಜಯನಗರ:
ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥಸಿಂಗ್ ತಂದೆಯ ಅಭಿಲಾಶೆಯಂತೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ.  ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ಕೆಲ ತಿಂಗಳಿಂದ ಸಂಪೂರ್ಣವಾಗಿ‌ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು ಓಡಾಡುತ್ತಿದ್ದರು.
ಈ ಕ್ಷೇತ್ರದಿಂದ 2008 ರಿಂದ ಇಲ್ಲಿವರಗೆ ಸತತವಾಗಿ ನಾಲ್ಕು ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿ, ವಿಜಯನಗರ ಜಿಲ್ಲೆ ಉದಯಕ್ಕೆ ಕಾರಣರಾದ ಆನಂದ್ ಸಿಂಗ್ ಕಳೆದ ಚುನಾವಣೆಯಲ್ಲಿ ಇದು  ಕೊನೆ ಚುನಾವಣೆ ಎಂದು  ಕೊಟ್ಟ ಮಾತಿನಂತೆ ನಡೆದುಕೊಂಡು. ಈಗ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಆತನನ್ನು ಗೆಲಿಸುವ ಹೊಣೆ ಹೊತ್ತಿದ್ದಾರೆ. ತಾನು ಗಟ್ಟಿಯಾಗಿರುವಾಗಲೇ ಮಗನ‌ ಪಟ್ಟಾಭಿಷೇಕಕ್ಕೆ ರೆಡಿಯಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಆರ್ ಗವಿಯಪ್ಪ. ಇವರು 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು. ನಂತರ ಕಾಂಗ್ರೆಸ್ ಸೇರಿ 2008 ರಲ್ಲಿ ಸೋತರು,  2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು, ಈಗ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಯುವಕ ಸಿದ್ದಾರ್ಥ ಸಿಂಗ್ ಅವರನ್ನು ಎದುರಿಸಬೇಕಿದೆ.  ಆನಂದ್ ಸಿಂಗ್ ಅವರ  ರಾಜಕೀಯದ ಒಳ‌ಮರ್ಮವನ್ನು ಭೇದಿಸಬೇಕಿದೆ.
ಗವಿಯಪ್ಪನವರಿಗೆ ಇದು ಕೊನೆ ಚುನಾವಣೆಯನ್ನುತ್ತಿದ್ದರೆ. ಸಿದ್ಧಾರ್ಥ್ ಸಿಂಗ್ ಅವರಿಗೆ ಮೊದಲ ಚುನಾವಣೆ. ಜಯಲಕ್ಷ್ಮೀ ಯಾರಿಗೋ.
ಏನಿದ್ದರೂ ಉಳಿದಂತೆ ಇಲ್ಲಿ ಕಣಕ್ಕಿಳಿಯುವವರು  ಆಟಕ್ಕುಂಟು ಲೆಕ್ಕಕ್ಕಿಲ್ಲ.
ಹಗರಿಬೊಮ್ಮಹಳ್ಳಿ
ಇಲ್ಲಿ ಇನ್ನೂ ಬಿಜೆಪಿ ಟಿಕೆಟ್ ಘೋಷಣೆ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಭೀಮಾನಾಯ್ಕ ಹ್ಯಾಟ್ರಿಕ್ ಗೆಲುವಿಗೆ ಪ್ರಯತ್ನ ನಡೆಸಿದ್ದಾರೆ. ಬಂಡಾಯ ಹೆಚ್ಚಿದೆ.
ಹಡಗಲಿ:
ಈ ಕ್ಷೇತ್ರಕ್ಕೆ ಹೊಸ ಮುಖ ಕೃಷ್ಣಾ  ನಾಯ್ಕ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಓದೋ ಗಂಗಪ್ಪ, ಚಂದ್ರನಾಯ್ಕ ಟಿಕೆಟ್ ಬಯಸಿದ್ದರು.
ಕಾಂಗ್ರೆಸ್ ನಿಂದ ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಇಲ್ಲಿ ಹ್ಯಾಟ್ರಿಕ್  ಗೆಲುವಿಗೆ ಮತ್ತು ಐದನೇ ಬಾರಿಗೆ ಶಾಸಕರಾಗಲು ಕಣಕ್ಕಿಳಿಯಲಿದ್ದಾರೆ.
ಎಂ.ಪಿ.ಪ್ರಕಾಶ್ ನಂತರ ನನ್ನ‌ಬಿಟ್ಟರೆ ಹಡಗಲಿಗೆ ಮತ್ತಿನ್ಯಾರು ಎನ್ನುತ್ತಿರುವ ಪಿಟಿಪಿಗೆ  ಈ ಬಾರಿ ಎಂ.ಪಿ.ಪ್ರಕಾಶ್ ಬಳಗ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರ ಬಳಗ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ‌ ಅವರ ಬಳಗ, ಪಂಚಮಸಾಲಿ ಬಳಗ ಹೀಗೆ ಹತ್ತು ಹಲವರು ಪಿಟಿಪಿಗೆ ಗಾಳ ಹಾಕಲು ಸಿದ್ದರಾಗಿದ್ದಾರೆ.
ಪಿಟಿಪಿ ವಿರೋಧಿ ಅಲೆ ಹೊಸಬ  ಕೃಷ್ಣಾ ನಾಯ್ಕ ಅವರಿಗೆ ಗೆಲುವು ತಂದು ಕೊಡುತ್ತಾ ಕಾದು ನೋಡಬೇಕಿದೆ ಉಳಿದವರ ಸ್ಪರ್ಧೆ ಇಲ್ಲಿ ಗೌಣ ಆಗಲಿದೆ. ಆದರೆ  ಈ ಹಿಂದೆ ಚಂದ್ರ ನಾಯಕ್ ಅವರನ್ನು  ಬಿಜೆಪಿಗೆ ಕರೆತಂದು ಶಾಸಕರನ್ನಾಗಿ ಮಾಡಿದ್ದ ಗಾಲಿ ಜನಾರ್ಧನರೆಡ್ಡಿ ಏನಾದರೂ  ಚಂದ್ರ ನಾಯ್ಕ ಅವರನ್ನು  ಕೆಆರ್ ಪಿಪಿಯಿಂದ ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಾ ಕಾದು ನೋಡಬೇಕಿದೆ.
 ಕೂಡ್ಲಿಗಿ:
ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಕಳೆದ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಲೋಕೇಸ್ ನಾಯ್ಕ ಅವರ ಹೆಸರನ್ನು ಘೋಷಣೆ ಮಾಡಿದೆ.
ಇವರು ಕ್ಷೇತ್ರದ ಹೊರಗಿನವರು. ಈ ಕ್ಷೇತ್ರದಲ್ಲಿ ಈವರಗೆ ಎನ್.ಟಿ.ಬೊಮ್ಮಣ್ಣ ಮತ್ತು ಎನ್.ಎಂ.ನಬಿ ಬಿಟ್ಟರೆ ಉಳಿದವರೆಲ್ಲ ಹೊರಗಿನಿಂದ ಬಂದು ಶಾಸಕರಾದವರೇ.
ಕಳೆದ ಬಾರಿ‌ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ನಿಂದ ಬಂದು‌ ಬಿಜೆಪಿಯಿಂದ ಸ್ಪರ್ಧಿಸಿ ಎನ್.ವೈ.ಗೋಪಾಲಕೃಷ್ಣ ಶಾಸಕರಾಗಿದ್ದರು. ಆ ಅದೃಷ್ಣ ಲೋಕೇಶ್ ನಾಯಕ್ ಅವರಿಗೆ ಒಲಿಯುತ್ತಾ ಕಾದು‌ ನೋಡಬೇಕಿದೆ.
ಇನ್ನು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಶ್ರೀನಿವಾಸ್‌ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ. ಕ್ಷೇತ್ರದಲ್ಲಿನ ಮೇಲ್ವರ್ಗದ ಮುಖಂಡರು, ಗುತ್ತಿಗೆದಾರರು ಯಾರ ಕಡೆ ವಾಲುತ್ತಾರೆ ಅವರಿಗೆ ಗೆಲುವು ಸಾಧ್ಯತೆ ಹೆಚ್ಚು.
 ಹರಪನಹಳ್ಳಿ:
ಈ ಕ್ಷೇತ್ರಕ್ಕೆ ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಇನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಹಾಲಿ ಶಾಸಕ, ಮಾಜಿ  ಸಚಿವ ಪಕ್ಷ ನಿಷ್ಠೆಯ  ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಅವರು ಟಿಕೆಟ್ ಬಯಸಿದ್ದರು. ಯಾವ ಕಾರಣಕ್ಕೆ ಅವರ ಹೆಸರು ತಡೆ ಹಿಡಿದಿದೆ ತಿಳಿದಿಲ್ಲ. ಪಂಚಮಸಾಲಿಗೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್  ಎಂ.ಪಿ.ಪ್ರಕಾಶ್ ಪುತ್ರಿಯರು ಸೇರಿದಂತೆ  ಹಲವರ ಬೇಡಿಕೆ ಇದೆ.