ಅಖಂಡ ದೇವದುರ್ಗ ತಾಲೂಕು ವಿಭಜನೆ ವಿರೋಧಿಸಿ ಬೃಹತ್ ಪ್ರತಿಭಟನೆ

ದೇವದುರ್ಗ.ಸೆ.21- ಅಖಂಡ ದೇವದುರ್ಗ ತಾಲೂಕನ್ನು ವಿಭಜನೆಗೊಳ್ಳಿಸದಂತೆ ಆಗ್ರಹಿಸಿ ಕೊತ್ತದೊಡ್ಡಿ ಗ್ರಾಮಸ್ಧರು ಬೃಹತ್ ಪ್ರತಿಭಟನೆ ರ್‍ಯಾಲಿ ಸೋಮವಾರ ನಡೆಸಿದರು.
ಅಖಂಡ ದೇವದುರ್ಗ ತಾಲೂಕನ್ನು ಹೋಡೆಯದನ್ನು ನಿಲ್ಲಿಸಬೇಕು ಹಾಗೂ ಅರಕೇರಾ ಹೊಸ ತಾಲೂಕ ಘೋಷಣೆಯನ್ನು ಸರಕಾರ ಕೂಡಲೆ ಹಿಪಡೆಯಬೇಕು ಎಂದು ಕೊತ್ತದೊಡ್ಡ ಗ್ರಾಮಸ್ಧರು ಆಕ್ರೋಶ ವ್ಯಕ್ತಪಡಿಸಿದರು.
ಅಖಂಡ ದೇವದುರ್ಗವನ್ನು ಶಾಸಕ ಶಿವನಗೌಡ ನಾಯಕ ಅವರ ರಾಜಿಕೀಯ ಲಾಭಕ್ಕಾಗಿ ಸರಕಾದ ಮೇಲೆ ಹೊತ್ತಡವನ್ನು ತಂದು ಅರಕೇರಾ ಹೊಸ ತಾಲೂಕ ಘೋಷಣೆ ಮಾಡಿಸಿದ್ದಾರೆ. ದೇಶದಲ್ಲಿ ಶೈಕ್ಷಣಿವಾಗಿ ಅರ್ಥಿವಾಗಿ ಸಾಮಾಜಿವಾಗಿ ಅತ್ಯಂತ ಹಿಂದುಳಿದ ದೇವದುರ್ಗ ತಾಲೂಕನ್ನು ವಿಭಜಿಸಿ ಏಕಾಏಕಿ ಅರಕೇರಾ ಗ್ರಾಮ ನೂತನ ತಾಲೂಕ ಕೇಂದ್ರವಾಗಿ ಇದೇ ತಿಂಗಳ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋಧಿಸಿ ಘೋಷಣೆ ಮಾಡಿಸಿರುವದು ತಾಲೂಕಿನ ತಾಲೂಕಿನ ಜನಾಭಿಪ್ರಾಯಕ್ಕೆ ವಿರುದ್ಧವಾಗಿದೆ. ಮತ್ತು ಅರಕೇರಾ ಗ್ರಾಮದಲ್ಲಿ ಕೆವಲ ೫ರಿಂದ ಆರೂ ಸಾವಿರ ಜನಸಂಖೆ ಹೊಂದಿದೆ ಅಂಥ ಗ್ರಾಮವೂ ತಮ್ಮ ರಾಜಕೀಯ ಲಾಲಸಗಾಗಿ ಅಖಂಡ ದೇವದುರ್ಗವನ್ನು ಹೊಡಯುವ ಉನ್ನಾರ್ ನಡೆಸಿದ್ದಾರೆ ಎಂದು ಕೀಡಿಕಾರಿದರು. ಕೂಡಲೇ ಸರಕಾರ ಅರಕೇರಾ ಹೊಸ ತಾಲೂಕ ಘೋಷಣೆ ಕೈಬಿಡಬೇಕು ಇಲ್ಲದೇ ನಿರ್ಲ್ಯಕ್ಷ ವಹಿಸಿದರೆ ದೇವದುರ್ಗ ತಾಲೂಕ ಹೊಡೆಯುವ ಉನ್ನಾರ ನಡೆಸಿದರೆ. ಮುಂದಿನ ದಿನಮಾನಗಳಿಲ್ಲಿ ಪಟ್ಟಣದ ಮಿನಿ ವಿಧಾನ ಸೌಧ ಮುಂದೆ ಉಗ್ರವಾದ ಧರಣಿ ಸತ್ಯಾಗ್ರಹ ಅಮಿಕೊಳ್ಳಲಾಗುವದು ಎಂದು ಪ್ರತಿಭಟನಕಾರು ಸರಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹನುಮಂತ್ರಾಯ ನಾಯಕ ಮಟ್ಲ, ಹನುಮಂತ್ರಾಯ ನಾಯಕ ಚಿಕ್ಕಡ್ಡ, ಹನುಮಯ್ಯ,ಶಿವರಾಜ ನಾಯಕ, ಗೋವಿದರಾಜ ನಾಯಕ,ಕರೇಮ್ಮ ನಾಯಕ, ಬಸವರಾಜ ನಾಯಕ ಮಟ್ಲ, ಹನುಮಂತ್ರಾಯ ಗಾಲಿ, ಹನುಮಂತ ಕಾರ್ಕಗಲ್ ಸೇರಿದಂತೆ ಇತರರು ಇದ್ದರು.