ಅಖಂಡವಾದ ಅಧಿಕಾರವಿದ್ದರೂ ವಿನಯವಾಗಿ ವರ್ತಿಸುವುದೇ ಪ್ರಕೃತಿ

ಕಲಬುರಗಿ:ಜೂ.6:ಪ್ರಗತಿ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ವತಿಯಿಂದ ಕಲಬುರಗಿ ನಗರದ ಹೀರಾಪೂರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀರಾಪೂರದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ರಾಣೋಜಿ ಡಿಪ್ಟಿ ಇವರು ಸಸಿಯನ್ನು ನೆಟ್ಟು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಂದಿನ ದಿನಗಳಲ್ಲಿ ಸಸಿಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳ ಪಾಲನೆ ಪೋಷಣೆ ಬಹುದೊಡ್ಡ ಸವಾಲಾಗಿದೆ. ಸಸಿಗಳನ್ನು ನೆಡುವುದರ ಜೊತೆ ಜೊತೆಗೆ ಅವುಗಳ ಪಾಲನೆ ಮಾಡುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಗತಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ಕೂಡಿ ಅವರು ಮಾತನಾಡುತ್ತಾ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಪ್ರತಿ ಮನೆಗೊಂದು ಸಸಿ ಅಭಿಯಾನದಡಿ 1 ಲಕ್ಷ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಂಡಿದ್ದು, ಪ್ರತಿ ಮನೆಗೂ ಕೂಡ ಒಂದೊಂದು ಸಸಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ಚಂದ್ರಶೇಖರ ಡಾಂಗೆ, ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಶಿವಗೊಂಡ ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಹಿರೇಮಠ, ಕಾರ್ಯದರ್ಶಿಗಳಾದ ಶ್ರೀ ಸಿದ್ದಣಗೌಡ ಬಿರಾದಾರ ಖಜಾಂಚಿಯಾದ ಶ್ರೀ ವಿನೋದ ಶೆಳ್ಳಗಿ ಹಾಗೂ ಶಾಲೆಯ ಸಹ ಶಿಕ್ಷಕರಾದ ಪರಮೇಶ್ವರ, ಸಾಹೇಬಲಾಲ, ಅನಿಲಕುಮಾರ, ಸುರೇಖಾ, ಸುಹಾಸಿನಿ, ಲತಾ, ಅಶ್ವಿನಿ, ಉಮಾ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.