ಅಕ್ಸಿಜನ್ ದುರಂತ 24ಮಂದಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ

ಚಾಮರಾಜನಗರ, ಜೂ. 07- ಜಿಲ್ಲೆಯ ಕೋವಿಡ್ ಅಸ್ಪತ್ರೆಯಲ್ಲಿ ಅಕ್ಸಿಜÀನ್ ಕೊರತೆಯಿಂದ 24 ಮಂದಿ ಮೃತಪಟ್ಟಿರುವ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಪ್ರಮುಖ ಕಾರಣಕರ್ತರಾಗಿದ್ದು, ಆಕೆ ವಿರುದ್ದ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ರೋಹಿಣಿ ಸಿಂಧೂರಿ ಹಾಗೂ ಡಗ್ಸ್ ಕಂಟ್ರೋಲ್ ಅರುಣ್ ಅವರೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪಿಂಗ್ಸ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ನಡೆದ ಹಿಂದಿನ ದಿನ ಅಂದರೆ ಮೇ ಒಂದರಂದು ಎರಡು ಜಿಲ್ಲೆಗಳ ಡ್ರಗ್ಸ್ ಕಂಟ್ರೋಲರ್ ನೋಡಲ್ ಅಧಿಕಾರಿಯಾಗಿದ್ದ ರವಿಕುಮಾರ್‍ರಿಗೆ ಮೊಬೈಲ್ ಕರೆ ಮಾಡಿ, ನನ್ನ ಅನುಮತಿ ಇಲ್ಲದೇ ಚಾಮರಾಜನಗರಕ್ಕೆ ಅಕ್ಸಿಜನ್ ಪೊರೈಕೆ ಮಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ. ಕೋವಿಡ್ ಅಸ್ಪತ್ರೆಗೆ ಮಾತ್ರ ನೀಡುತ್ತಿರುವುದು ಎಂದು ರವಿ ಪರಿಪರಿಯಾಗಿ ಜಿಲ್ಲಾಧಿಕಾರಿಯನ್ನು ಬೇಡಿಕೊಂಡಿದ್ದಾರೆ.
ಆದರೂ ಸಹ ನೀನು ಕಚೇರಿಗೆ ಕಡತಗಳನ್ನು ತೆಗೆದುಕೊಂಡು ಬಾ ಎನ್ನುವ ಜೊತೆಗೆ, ಉದ್ದಟನತನದಿಂದ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆಂದು ಬೆದರಿಸುವುದು ಸಹ ದಾಖಲಾಗಿದೆ. ಆಮ್ಲಜನಕ ಸರಬರಾಜು ಮಾಡುವ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ರೋಹಿನಿ ಸಿಂಧೂರಿಯು ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಚಾಮರಾಜನಗರಕ್ಕೆ ಕೊಡಲಾಗುವುದಿಲ್ಲ ಎಂದು ತಿರಸ್ಕರಿಸುವುದು ಆಡಿಯೋ ಕ್ಲಿಪ್ಪಿಂಗ್‍ನÀಲ್ಲಿ ಬಹಿರಂಗಗೊಂಡಿದೆ ಎಂದು ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ತುಣುಕುಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದರು.
ಚಾಮರಾಜನಗರ ಜಿಲ್ಲೆಯ ಬಗ್ಗೆ ತಾತ್ಸಾರವಾಗಿ ಮಾತನಾಡುವ ಜೊತೆಗೆ ಡಿಪ್ಯೋಟಿ ಡೈರೆಕ್ಟರ್ ರವಿಯನ್ನು ಬೆದರಿಸಿದ ಪರಿಣಾಮ ಅಂದು ನಮ್ಮ ಜಿಲ್ಲೆಗೆ ಬರಬೇಕಾಗಿದ್ದ ಅಕ್ಸಿಜನ್ ಇಲ್ಲದೇ ನಮ್ಮ ಜಿಲ್ಲೆಯ 24ಕ್ಕು ಹೆಚ್ಚು ಕೋವಿಡ್ ರೋಗಿಗಳು ಸಾವಿಗೀಡಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇಂಥ ಗುರುತರವಾದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಆಕೆಯ ಮೇಲೆ ಕೊಲೆ ಮೊಕದ್ದಮೆ ಕೇಸನ್ನು ದಾಖಲಿಸಿ ಕರ್ತವ್ಯದಿಂದ ಅಮಾನತ್ತುಪಡಿಸಿದರೆ, ಜಿಲ್ಲೆಯ ಜನರಿಗೆ ನ್ಯಾಯ ದೊರಕುತ್ತದೆÉ ಎಂದರು.
ರಾಜ್ಯ ಸರ್ಕಾರ ಈಕೆಯ ಮೇಲೆ ಕೊಲೆ ಮೊಕದ್ದಮೆಯನ್ನು ದಾಖಲು ಮಾಡದಿದ್ದರೆ ಜಿಲ್ಲೆಯ ಜನತೆ ಪರವಾಗಿ ನಾನೇ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತೇನೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರನ್ನು ನೀಡುತ್ತೇನೆ ಎಂದು ಮಲ್ಲೇಶ್ ತಿಳಿಸಿದರು.
ರಾಜ್ಯ ಸರ್ಕಾರ ಈಗ ನೀಡಿರುವ 2 ಲಕ್ಷ ರೂ. ಪರಿಹಾರ ಕಡಿಮೆ. ಕನಿಷ್ಟ ಪಕ್ಷ ಈ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ರೈತ ಮುಖಂಡ ಮಲ್ಲೇಶ್ ಸರ್ಕಾರವನ್ನು ಒತ್ತಾಯಿಸಿದರು.