‘ಅಕ್ಷಿ ಹಾಡು ಬಿಡುಗಡೆ ನೇತ್ರದಾನದ ಅರಿವು

ರಾಷ್ಟ್ರ ಪ್ರಶಸ್ತಿ ಪಡೆದ “ಅಕ್ಷಿಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಪುಷ್ಪನಮನ ಸಲ್ಲಿಸಿ, ಹಾಡಿನ ಬಗ್ಗೆ ಮಾತನಾಡಿದ ದೂರವಾಣಿ ಸಂಭಾಷಣೆ ಕೇಳಿಸಲಾಯಿತು.
ನಟಿ ಸ್ಪರ್ಷ ರೇಖಾ, ನಟ ವಿಜಯಸೂರ ಮಿಂಟೋ ಹಾಸ್ಪಿಟಲ್ ನಿರ್ದೇಶಕಿ ಡಾ.ಸುಜಾತ ರಾಥೋಡ್ ಹಾಗೂ ಉದ್ಯಮಿ ಗುಪ್ತ “ಅಕ್ಷಿ ಹಾಡುಗಳನ್ನು ಬಿಡುಗಡೆ ಮಾಡಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು
ಈ ವೇಳೆ ನಟಿ ಸ್ಪರ್ಶ ರೇಖಾ,ಇಂತಹ ಕಥೆ ಆಯ್ಕೆ ಮಾಡಿಕೊಂಡಿದಕ್ಕಾಗಿ ನಿರ್ದೇಶಕರಿಗೆ ಹ್ಯಾಟ್ಸ್ ಆಫ್. ಚಿತ್ರ ನೋಡಲು ಕಾತುರಳಾಗಿದ್ದೇನೆ. ನೇತ್ರದಾನ ಮಹಾದಾನ ಎಂಬ ವಿಷಯದೊಂದಿಗೆ ಚಿತ್ರ ನಿರ್ಮಾಣವಾಗಿರುವುದು ಸಂತೋಷ. ಹಾಡುಗಳು ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಟ ವಿಜಯ್ ಸೂರ್ಯ, ಎಲ್ಲರೂ ಒಳ್ಳೆಯ ಸಂದೇಶವಿರುವ ಸಿನಿಮಾ ಮಾಡಬೇಕೆಂದುಕೊಳ್ಳುತ್ತಾರೆ. ಆದರೆ ಕಾರ್ಯರೂಪಕ್ಕೆ ತರುವುದು ವಿರಳ. ಕಮರ್ಷಿಯಲ್ ಸಿನಿಮಾಗಳ ಮೇಲೆ ಎಲ್ಲರ ಒಲವು. ಇಂತಹ ಒಳ್ಳೆಯ ಕಥೆ ಆಧಾರಿತ ಚಿತ್ರ ತೆರಗೆ ತರುತ್ತಿರುವ ನಿರ್ದೇಶಕ ಮನೋಜ್ ಕುಮಾರ್ ತಂಡಕ್ಕೆ ಶುಭವಾಗಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಿಂಟೋ ಆಸ್ಪತ್ರೆ ನಿರ್ದೇಶಕರಾದ ಡಾ.ಸುಜಾತ ರಾಥೋಡ್, ವ್ಯಕ್ತಿ ಸತ್ತ ಮೇಲೂ ಅವನ ಕಣ್ಣುಗಳು ಆರು ಗಂಟೆಗಳು ಜೀವಂತವಾಗಿರುತ್ತದೆ. ಎಷ್ಟೋ ಜನ ಕಣ್ಣಿಲ್ಲದೇ ಏನು ನೋಡಿಲ್ಲ. ಅಂತಹವರಿಗೆ ನಿಮ್ಮ ಕಣ್ಣುಗಳನ್ನು ದಾನ ಮಾಡಿ ,ಈ ನಿಟ್ಟಿನಲ್ಲಿ ಚಿತ್ರ ತಂಡದ ಕೆಲಸ ಶ್ಲಾಘನೀಯ ಎಂದರು. ಚಿತ್ರದ ನಿರ್ಮಾಪಕ ಹಾಗು ಸಂಗೀತ ನಿರ್ದೇಶಕ ಶ್ರೀನಿವಾಸ್ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡು ಎಲ್ಲರ ಸಹಕಾರವಿರಲಿ ಎಂದರು
ನಿರ್ದೇಶಕ ಮನೋಜ್ ಕುಮಾರ್, ಕಥೆ ಸಿದ್ದಮಾಡಿಕೊಂಡು ಐದು ವರ್ಷಗಳ ಕಾಲ ನಿರ್ಮಾಪಕರಿಗೆ ಹುಡುಕಾಡಿದೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ..
ಹಾಗೆ ಈಗ ಸಮಯ ಕೂಡಿ ಬಂದಿದೆ. ಸಿನಿಮಾ ಸಿದ್ದವಾಗಿದೆ. ಎಲ್ಲರ ಹಾರೈಕೆಯಿಂದ ರಾಷ್ಟ್ರಪ್ರಶಸ್ತಿ ಬಂದಿದೆ ಎಂದರು.
ನನ್ನದು ಚಿಕ್ಕಹಳ್ಳಿ ,ಅಲ್ಲಿ ಪೇಪರ್ ಕೂಡ ಸಿಗಲ್ಲ. ನನ್ನ ಚಿತ್ರಕ್ಕೆ ರಾಷ್ಟಪ್ರಶಸ್ತಿ ಬಂದಾಗ, ಎಲ್ಲಾ ಪತ್ರಿಕೆಗಳಲ್ಲಿ ಫೋಟೊ ಬಂದಿತ್ತು. ಅದನ್ನು ನೋಡಲು ನನ್ನ ಅಪ್ಪ ಏಳು ಕಿಲೋಮೀಟರ್ ದೂರದಿಂದ ಪತ್ರಿಕೆ ಕೊಂಡು, ನೋಡಿ ಸಂತೋಷ ಪಟ್ಟಿದ್ದರು. ನಾನು ಇಲ್ಲಿಯವರೆಗೂ ತಾಯಿಗೆ ಒಂದು ಸೀರೆ ಕೂಡ ಕೊಡಿಸಿಲ್ಲ.
ಈ ಸಂತಸವೇ ನನ್ನ ಹೆತ್ತವರಿಗೆ ನನ್ನ ಉಡುಗೊರೆ ಎಂದು ಭಾವುಕರಾದರು.
ಕಲಾವಿದರಾದ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ಮುಂತಾದವರು ಅಭಿಪ್ರಾಯ ಹಂಚಿಕೊಂಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದರು. ನಿರ್ಮಾಣದಲ್ಲಿ ಶ್ರೀನಿವಾಸ್ ವಿ, ರಮೇಶ್ ಹಾಗೂ ರವಿ ಹೆಚ್ ಎಸ್ ಚಿತ್ರದ ನಿರ್ಮಾಪಷದಲ್ಲಿ ಕೈ ಜೋಡಿಸಿದ್ದಾರೆ.