
ಅಫಜಲಪುರ:ಮಾ.1:ಆಳಂದ ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಪಂಚಾಯತ ಕಲಬುರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಕ್ಷರ ಸಿರಿ ಪ್ರಶಸ್ತಿಯನ್ನು ತಾಲೂಕಿನ ಸ.ಹಿ.ಪ್ರಾ.ಶಾಲೆ ಖೇಡ ಉಮ್ಮರ್ಗಾ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ ಗುಣಾರಿ ಅವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಸಿದ್ಧರಾಮ ಪಾಟೀಲ್, ಹಾಗೂ ಶಾಲಾ ಅಭಿವೃದ್ಧಿ ಅಧ್ಯಕ್ಷರು, ಸದಸ್ಯರು, ಉಮ್ಮರ್ಗಾ ಗ್ರಾಮದ ಯುವಕರು ಭಾಗವಹಿಸಿದರು.
ಮೂಲತಃ ಅಫಜಲಪುರ ತಾಲೂಕಿನವರಾದ ವಿಶ್ವನಾಥ ಗುಣಾರಿ ಅವರಿಗೆ ಅಕ್ಷರ ಸಿರಿ ಪ್ರಶಸ್ತಿಯನ್ನು ಲಭಿಸಿದ ಹಿನ್ನೆಲೆ ತಾಲೂಕಿನ ಶಿಕ್ಷಕರಾದ ಶ್ರೀಕಾಂತ್ ಕಾಚಾಪುರ್, ಶಿವಾನಂದ ಕಲಬುರಗಿ, ರಾಜಕುಮಾರ ಗುಣಾರಿ,ವೀರವಂತಪ್ಪ ಜಮಾಣಿ, ಜಗು ಕೊರಳ್ಳಿ, ಅಪ್ಪಾಶಾ ಜೋಗುರ, ಸಿದ್ಧರಾಮ ಉಡಚಣ, ಗುರುಲಿಂಗಪ್ಪ ಪ್ರಧಾನಿ, ಶಿವಾನಂದ ಗುಣಾರಿ,ರಾವುತ ಭಿಂಗೋಳಿ,ಜ್ಯೋತಿ ಮಣ್ಣುರ, ಸವಿತಾ ಮನ್ಮಿ , ಮಹಾನಂದ ಹೆಗ್ಗಿ, ಪರಶುರಾಮ್ ಕರನಾಳ,ಸಂಗಮನಾಥ ಸಾಳಾಪುರ, ಮುಂತಾದ ಶಿಕ್ಷಕ ಹಾಗೂ ಶಿಕ್ಷಕಿಯರು ಹರ್ಷ ವ್ಯಕ್ತಪಡಿಸಿದರು.