ಕಲಬುರಗಿ,ಜೂ.25: ತಾಲೂಕಿನ ಹೊನ್ನಕಿರಣಗಿ ಗ್ರಾಮದ ಯುವಕವಿ ಸಂಗಮನಾಥ ಪಿ ಸಜ್ಜನ ರವರ ಅಕ್ಷರ ವೈಭವ ಎಂಬ ಚೊಚ್ಚಲ ಕವನ ಸಂಕಲನಕ್ಕೆ ಚೇತನ ಫೌಂಡೇಶನ್ ಕರ್ನಾಟಕ ಹಾಗೂ ಸುದ್ದಿವಾಹಿನಿ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕೇಂದ್ರ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ನುಡಿ ಸಡಗರ ಎಂಬ ಸಮಾರಂಭದಲ್ಲಿ ಈ ಕವನ ಸಂಕಲನಕ್ಕೆ ನುಡಿಸಿರಿ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಖ್ಯಾತ ಕವಿಗಳು ಎಚ್ ದುಂಡಿರಾಜ್, ಅಧ್ಯಕ್ಷತೆಯನ್ನು ಡಾ.ಜ್ಯೋತಿ.ಕೆ.ಸಿ ಹಾಗೂ ಮುಖ್ಯ ಅತಿಥಿಗಳಾಗಿ ಖ್ಯಾತ ಕಾದಂಬರಿಕಾರರಾದ ಯತಿರಾಜ್ ವೀರಾಂಬುಧಿಯವರು ವಹಿಸಿದ್ದರು. ಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಾಸುದೇವ ನಾಡಿಗ ಸಾಹಿತಿಗಳು, ಹಾಗೂ ಡಾ.ಸಿ.ನಂದಿನಿ, ಚಿತ್ರ ಸಾಹಿತಿ ಹೃದಯ ಶಿವ ಮುಂತಾದ ಸಾಹಿತಿಗಳು ಹಾಗೂ ಚೇತನ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಗಮನಾಥ ಪಿ ಸಜ್ಜನ ಅವರ ಅಕ್ಷರ ವೈಭವ ಚೊಚ್ಚಲ ಕವನ ಸಂಕಲನವು ಎರಡು ತಿಂಗಳ ಹಿಂದೆಯಷ್ಟೇ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಲೂಕು ಕಸಾಪ ನೆರವಿನೊಂದಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ತಾಲೂಕು ಕಸಾಪ ಅಧ್ಯಕ್ಷರಾದ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ಅವರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆಯಾಗಿತ್ತು.
ಕವಿಯ ಸ್ಪಂದನಾಶೀಲ ಮನಸ್ಸು ಇಲ್ಲಿನ ಕವನಗಳಲ್ಲಿ ಬದುಕು, ಅಕ್ಷರ, ದೇಶಭಕ್ತಿ, ಒಗ್ಟಿನ ಬದುಕನ್ನು ಪ್ರತಿಬಿಂಬಿಸುತ್ತದೆ. ಕವಿಯ ನೂರಾರು
ಭಾವನೆಗಳು ಸರಳ ಮತ್ತು ಸಾಮಾನ್ಯ ಭಾಷೆಯಲ್ಲಿ ವ್ಯಕ್ತವಾಗಿವೆ. ಕೇಂದ್ರ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶುಭ ಸಂದೇಶ ಬರೆದು ಹಾರೈಸಿದ್ದಾರೆ. ವಿಶೇಷವಾಗಿ ತಾಯಿಯೇ ಈ ಕವನ ಸಂಕಲನಕ್ಕೆ ಬೆನ್ನುಡಿಯಲ್ಲಿ ಹರಸಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ಕವನ ಸಮಕಲನವಾಗಿದೆ.
ಆದರೆ ಅತಿ ಕಡಿಮೆ ಅವಧಿಯಲ್ಲಿಯೇ ಈ ಕವನ ಸಂಕಲನವು ನುಡಿಸಿರಿ ಪುಸ್ತಕ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಮದು ಶರಣು ಬಿ ಗದ್ದುಗೆ ಕನ್ನಡ ಜಾಗ್ರತ ಮಾಜಿ ಸದಸ್ಯರು ಯಾದಗಿರಿ,
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಹಿರಿಯ ಮಕ್ಕಳ ಕವಿ ಎ.ಕೆ.ರಾಮೇಶ್ವರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಕನ್ನಳ್ಳಿ, ಎಮ್.ಎನ್.ದೇಸಾಯಿ ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ ಹಾಗೂ ಶಿಕ್ಷಣ ಪ್ರೇಮಿ ಡಾ.ಕೇಶವ ಕಾಬಾ ಹರ್ಷ ವ್ಯಕ್ತಪಡಿಸಿದ್ದಾರೆ.