ಅಕ್ಷರ ಲೋಕದ ಮಾಂತ್ರಿಕ ರವಿ ಬೆಳಗೆರೆ ನಿಧನಕ್ಕೆ ಶ್ರುತಿ ಸಾಹಿತ್ಯ ಮೇಳದಿಂದ ಸಂತಾಪಖ್ಯಾತ ಪತ್ರಕರ್ತ, ಕಾದಂಬರಿಕಾರ, ಉತ್ತಮ ನಿರೂಪಕ ಶ್ರೀ ರವಿ ಬೆಳಗೆರೆ ಅವರ ನಿಧನಕ್ಕೆ ರಾಯಚೂರಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ ಶ್ರುತಿ ಸಾಹಿತ್ಯ ಮೇಳದಿಂದ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಗಿದೆ.
ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳೀಧರ ಕುಲಕರ್ಣಿ ಸಂತಾಪ ಸೂಚಿಸಿ ಸಿರಿಕಂಠದ ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ ಅವರು ಸಾಹಿತ್ಯ ಲೋಕದ ಹೊಳೆಯುವ ಬೆಳಕಾಗಿದ್ದರು. ತಮ್ಮ ೬೨ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಒಳಗಾಗಿ ಅಧ್ಭುತವಾದ ಸಾಧನೆಯನ್ನು ಮಾಡಿರುತ್ತಾರೆ. ಇವರ ಹಲವಾರು ಕಾದಂಬರಿಗಳು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅವರು ೧೯೯೫ ರಲ್ಲಿ ಪ್ರಾರಂಭಿಸಿದ ಹಾಯ್ ಬೆಂಗಳೂರು ಪತ್ರಿಕೆ ಪತ್ರಿಕೋಧ್ಯಮದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿತು. ಅಕ್ಷರ ಲೋಕದ ಬ್ರಹ್ಮ ಹೊಸ ಟ್ರೆಂಡನ್ನು ಸೃಷ್ಠಿಸಿದ ರವಿ ಬೆಳಗೆರೆ ಅವರು ಕನ್ನಡ ಸಾರಸತ್ವ ಲೋಕದ ಅದ್ಭುತ ಶಕ್ತಿ. ಓ ಮನಸ್ಸೆ, ಖಾಸ್‌ಬಾತ್ ಮತ್ತು ವಿಶಿಷ್ಟ ರೀತಿಯ ಕಾದಂಬರಿಗಳು ಅಸಂಖ್ಯ ಓದುಗರನ್ನು ಸೃಷ್ಠಿಸಿವೆ. ಇಂತಹ ಸೃಜನಶೀಲ ಸಾಹಿತಿ, ಬರಹಗಾರ, ಅಂಕಣಕಾರ, ಚಲನಚಿತ್ರ ನಟ ಮತ್ತು ಸುಂದರ ನಿರೂಪಕ ಅಸ್ತಂಗತವಾಗಿದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.