ಅಕ್ಷರ ಬ್ರಹ್ಮ ಜಿ. ವೆಂಕಟಸುಬ್ಬಯ್ಯರವರಿಗೆ ಸಂತಾಪ ಸಲ್ಲಿಕೆ

ಮೈಸೂರು:ಏ:19: ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ನಮ್ಮನ್ನು ಅಗಲಿದ ಕನ್ನಡ ಅಕ್ಷರ ಬ್ರಹ್ಮ ಪೆÇ್ರಫೆಸರ್ .ಜಿ ವೆಂಕಟಸುಬ್ಬಯ್ಯ ರವರಿಗೆ ಸಂತಾಪ ಸಲ್ಲಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ. ರಾಜಣ್ಣ, ವಿದ್ವತ್ ಲೋಕದ ಧ್ರುವತಾರೆ. ತಮ್ಮ ತಂದೆ ಮತ್ತು ತಮ್ಮ ತಂದೆ ಮತ್ತು ತಾತ ನವರಿಂದ ಅವರಿಂದ ಕಲಿತ ಕನ್ನಡ ಮತ್ತು ಸಂಸ್ಕೃತ ಪುರಸಭೆ ಇವರ ಭಾಷಾ ಪ್ರೌಢಿಮೆಗೆ ಭಾಷಾ ಪ್ರೌಢಿಮೆಗೆ ಅಡಿಗಲ್ಲು ಎಂಬಂತಾಗಿತ್ತು.ವ್ಯಕ್ತಿತ್ವದಿಂದ ವಿದ್ವತನವರಿಗೆ ಅವರು ನಮಗೊಂದು ಮಾದರಿ. ಅವರು ಕನ್ನಡದ ಗಣಿ, ಕನ್ನಡದ ಸಾರ ಸತ್ವಗಳನ್ನೆಲ್ಲ ಹೀರಿ ಬೆಳೆದು ನಿಂತಿದ್ದ ದೈತ್ಯ ಕನ್ನಡದ ಪ್ರತಿಭೆ. ಕನ್ನಡ ಸಾಹಿತ್ಯ ಪರಿಷತ್‍ನ ಕನ್ನಡ ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿ ಮುಂದೆ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಇವರದ್ದಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಸದಸ್ಯ ಎಂ.ಆರ್. ಬಾಲಕೃಷ್ಣ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ರೇಣುಕರಾಜ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಯುವ ಮುಖಂಡ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲೋಹಿತ್, ಸುಚೀಂದ್ರ, ಚಕ್ರಪಾಣಿ, ರಂಗನಾಥ್, ರಾಕೇಶ್ ಕುಂಚಿಟಿಗ ಇನ್ನಿತರರು ಭಾಗವಹಿಸಿದ್ದರು.