ಅಕ್ಷರ ದಾಸೋಹ

ಹರಿಹರದ ಧೂಳೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ೫೩ ದಿನಗಳ ಆಹಾರಧಾನ್ಯ ಅಕ್ಕಿ,ಬೆಳೆ,ಗೋಧಿಯನ್ನು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಪಿ.ಆರ್.ರಾಮಕೃಷ್ಣಪ್ಪ ಮಕ್ಕಳಿಗೆ ವಿತರಿಸಿದರು.ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಹೆಚ್.ಬಸವರಾಜಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ವೀರೇಶ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಿಜಲಿಂಗಪ್ಪ ಹುಚ್ಚೆಂಗೆಪ್ಪ,ಟಿ.ಆರ್.ಅನಂತ, ವೀರನಗೌಡ, ಶಿಕ್ಷಕರಾದ ಕೆ.ಮಂಗಳ,ಹೇಮಾ ಲೈಖಾಬಾನು, ರಶ್ಮಿ ಡಿ.ಜಿ, ಶರಣಕುಮಾರ ಹೆಗಡೆ,ಅಡಿಗೆ ಸಿಬ್ಬಂದಿ ಮಕ್ಕಳು ಹಾಜರಿದ್ದರು.